ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೇಗ ಎಷ್ಟಿದ್ದರೂ ಜರ್ಕ್ ಸಲ್ಲದು :ನೈಋತ್ಯ ರೈಲ್ವೆ ಕಾರ್ಯದಕ್ಷತೆ ನೋಡಿದರೆ ಬೇರಗಾಗುವುದು ಖಂಡಿತ

ಹುಬ್ಬಳ್ಳಿ: ಅದು ಕೇಂದ್ರ ಸರ್ಕಾರದ ಮಹತ್ವಪೂರ್ಣ ಸೇವೆ.ಈ ಸೇವೆಯಿಂದ ಸಾಕಷ್ಟು ಜನರು ತಮ್ಮ ಕೆಲಸ ಕಾರ್ಯವನ್ನು ಮಾಡಿಕೊಳ್ಳುತ್ತಿದ್ದಾರೆ.ಈಗ ಈ ಸೇವೆ ಮತ್ತಷ್ಟು ಉತ್ಕೃಷ್ಟ ಮಟ್ಟದಲ್ಲಿ ಸಾರ್ವಜನಿಕರಿಗೆ ಸಿಗಲಿದೆ.ಅಲ್ಲದೇ ಮೊದಲಿಗಿಂತ ಈಗ ವಿನೂತನ ಆವಿಷ್ಕಾರದ ಮೂಲಕ ಸಾರ್ವಜನಿಕರಿಗೆ ದೊರೆಯಲಿದೆ ಏನಿದು ಸೇವೆ.ಏನಿದು ಆವಿಷ್ಕಾರ ಅಂತೀರಾ ಈ ಸ್ಟೋರಿ ನೋಡಿ...

ವಾಯ್ಸ್ ಓವರ್:ಕೇಂದ್ರ ರೈಲ್ವೆ ಇಲಾಖೆಯು ಹತ್ತು ಹಲವಾರು ಯೋಜನೆಗಳನ್ನು ಹೊತ್ತು ಸಾರ್ವಜನಿಕರ ಸೇವೆಯ ಮೂಲಕ ತನ್ನ ಕನಸನ್ನು ಸಾಕಾರಗೊಳಿಸಿದೆ ಈಗ ಸೇವೆಯಲ್ಲಿ ಮತ್ತಷ್ಟು ವೇಗದೊಂದಿಗೆ ಹಾಗೂ ಅಧುನಿಕ ತಂತ್ರಜ್ಞಾನದ ಮೂಲಕ ಉತ್ಕೃಷ್ಟ ಮಟ್ಟದ ಸೇವೆಯನ್ನು ನೀಡಲು ಮುಂದಾಗಿದೆ.ಎಷ್ಟೇ ವೇಗವಾಗಿ ಚಲಿಸಿದರು ಕೂಡ ಟ್ರೈನ್ ಕೊಂಚ ಕೂಡ ಅಲುಗಾಡದಂತೇ ಹಾಗೂ ಸ್ವಲ್ಪ ಕೂಡ ಜರ್ಕ್ ಹೊಡೆಯದಂತೆ ರೈಲ್ವೆಯನ್ನು ಉನ್ನತೀಕರಿಸಲಾಗಿದೆ.

ಹೌದು..ಇಂದು ನೈಋತ್ಯ ರೈಲ್ವೆ ವಲಯದ ಲೋಂಡಾ ಹಾಗೂ ಮಿರಜ್ ನಡುವಿನ ರೈಲ್ವೆ ಮಾರ್ಗದಲ್ಲಿ ಸುಮಾರು 125km/hಕ್ಕೂ ಅಧಿಕ ವೇಗವಾಗಿ ಚಲಿಸಿ ಅದರಲ್ಲಿ ಒಂದು ನೀರು ತುಂಬಿದ ಗ್ಲಾಸ್ ಇಟ್ಟಿದ್ದು,ಸ್ವಲ್ಪ ಕೂಡ ಗ್ಲಾಸ್ ಅಲುಗಾಡಿಲ್ಲ.ಅಲ್ಲದೇ ಒಂದು ಹನಿ ನೀರು ಕೂಡ ಗ್ಲಾಸಿನಿಂದ ಕೆಳ ಚೆಲ್ಲಿಲ್ಲ. ರೈಲ್ವೆ ಇಲಾಖೆಯು ಸಾಕಷ್ಟು ಪರಿಶ್ರಮದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಸಾಕಷ್ಟು ಜನಹಿತ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ರೈಲ್ವೆ ಇಲಾಖೆ ಈಗ ಇಂತಹದೊಂದು ಯಶಸ್ಸಿನ ಪ್ರಾಯೋಗಿಕ ಚಾಲನೆ ಮಾಡಿದ್ದು,ಕೇಂದ್ರ ಸಚಿವ ಪಿಯುಷ್ ಗೋಯಲ್ ನೈಋತ್ಯ ರೈಲ್ವೆ ಇಲಾಖೆಯ ಕಾರ್ಯದಕ್ಷತೆಯನ್ನು ಮೆಚ್ಚಿದ್ದಾರೆ.ಇನ್ನೂ ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೆರ್ಶಕರ ನಿರ್ದೇಶನದ ಕಾರ್ಯ ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿದೆ.

Edited By : Manjunath H D
Kshetra Samachara

Kshetra Samachara

10/11/2020 11:12 am

Cinque Terre

43.41 K

Cinque Terre

10

ಸಂಬಂಧಿತ ಸುದ್ದಿ