ವರದಿ: ವಿನೋದ ಇಚ್ಚಂಗಿ
ನವಲಗುಂದ : ಅಚ್ಚುಕಟ್ಟಾದ ಮಾರುಕಟ್ಟೆ ಈಗ ಕಸದ ತಿಪ್ಪೆಗಿಂತ ಹೊಲಸಾಗಿದೆ. ವ್ಯಾಪಾರಿಗಳು, ಗ್ರಾಹಕರು ಇರಬೇಕಾದ ಹೊಸ ಮಾರುಕಟ್ಟೆಯಲ್ಲಿ ಈಗ ಬಿಡಾಡಿ ದನಗಳ, ನಾಯಿ, ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದೆಲ್ಲಾ ಎಲ್ಲಿ ಅಂತೀರಾ..? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ...
ಹೌದು ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಮತ್ತು ಮಾರುಕಟ್ಟೆಯ ಟ್ರಾಫಿಕ್ ಜಾಮ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸುಸರ್ಜಿತ ಮಾರುಕಟ್ಟೆಯನ್ನು ನಿರ್ಮಿಸಿದರೆ, ಇಲ್ಲಿನ ವ್ಯಾಪಾರಸ್ಥರು ಹೊಸದಾಗಿ ಕಟ್ಟಿಸಿದ ಮಾರುಕಟ್ಟೆಯನ್ನು ಬಿಟ್ಟು ರಸ್ತೆ ಬದಿಯಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದಾರೆ. ಇನ್ನೂ ಈ ಹೊಸದಾಗಿ ನಿರ್ಮಿಸಲಾದ ಮಾರುಕಟ್ಟೆ ಈಗ ಖಾಲಿ ಬಿದಿದ್ದು, ಬಿಡಾಡಿ ದನಗಳಿಗೆ, ಬೀದಿ ನಾಯಿಗಳಿಗೆ ಮತ್ತು ಹಂದಿಗಳಿಗೆ ವಾಸಸ್ಥಾನವಾಗಿದೆ. ಇನ್ನೂ ಈ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಯಾಕೆ ಕೂರುತ್ತಿಲ್ಲ, ಮತ್ತು ಇದರಿಂದ ಏನೂ ಸಮಸ್ಯೆಗಳು ಆಗ್ತಾ ಇವೆ ಅಂತಾ ನವಲಗುಂದ ಬೀದಿ ಬದಿ ವ್ಯಾಪಾರಸ್ಥ ಸಂಘದ ಅಧ್ಯಕ್ಷ ರಿಯಾಜ್ ನಾಶಿಪುಡಿ ಹೇಳೋದು ಹೀಗೆ.
ಅದೇನೇ ಇರಲಿ ಸರ್ಕಾರ ಕಲ್ಪಿಸಿಕೊಟ್ಟ ಇಂತಹ ಒಳ್ಳೇ ಮಾರುಕಟ್ಟೆ ಈಗ ಹಾಳಾಗಿ ಹೋಗುತ್ತಿದೆ. ಇನ್ನೂ ಇಲ್ಲಿ ವ್ಯಾಪಾರಸ್ಥರ ಇಷ್ಟೆಲ್ಲಾ ಸಮಸ್ಯೆ ಕಾಣುತ್ತಿರುವುದರಿಂದ ಸರ್ಕಾರ ದೊಡ್ಡ ಮಾರುಕಟ್ಟೆಯನ್ನು ಸಹ ನಿರ್ಮಿಸಿದೆ. ಅಲ್ಲಿಗೆ ವ್ಯಾಪಾರಸ್ಥರು ಸ್ಥಳಾಂತರಗೊಳ್ಳಬೇಕು. ಇದರಿಂದ ಮಾರುಕಟ್ಟೆಯಲ್ಲಿರುವ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಬಗೆಹರಿಯಲಿದೆ...
Kshetra Samachara
07/11/2020 03:09 pm