ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತೂ ಇಂತೂ ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡಕ್ಕೆ ಬಂತೂ ಬಾಡಿಗೆ ಹರಾಜು ಭಾಗ್ಯ

ಹುಬ್ಬಳ್ಳಿ: ಅಂತೂ ಇಂತೂ ಮಹಾನಗರ ಪಾಲಿಕೆ ತನ್ನ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಹರಾಜು ಹಾಕಲು ನಿರ್ಧರಿಸಿದ್ದು,ಪಬ್ಲಿಕ್ ನೆಕ್ಸ್ಟ್ ವರದಿಗೆ ಸಿಕ್ಕ ಫಲಶೃತಿಯಾಗಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಪಾಲಿಕೆ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಾಖಲೆಯಾಗಲಿದೆ.

ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ 'ಮಹಾನಗರ ಪಾಲಿಕೆ ಆಧಾಯಕ್ಕೆ ಹೊಡೆತ:ಹರಾಜು ಆಗದ ಪಾಲಿಕೆ ಕಟ್ಟಡಗಳು ಎಂಬುವಂತ ವರದಿಯೊಂದನ್ನು ಭಿತ್ತರಿಸಿದ ಬೆನ್ನಲ್ಲೇ ಮಹಾನಗರ ಪಾಲಿಕೆ ಎಚ್ಚೇತ್ತುಕೊಂಡು ಪಾಲಿಕೆ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು 1974ರ ಬಳಿಕ ಮೊದಲ ಬಾರಿಗೆ ಬಹಿರಂಗವಾಗಿ ಜಾಹೀರು ಲೀಲಾವು ಮೂಲಕ ಬಾಡಿಗೆ ವಹಿಸಿಕೊಡಲು 2020ರ ಸೆಪ್ಟೆಂಬರ್ 5ರಂದೇ ಆಡಳಿತಾಧಿಕಾರಿಗಳ ನೇತೃತ್ವದ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚುನಾಯಿತ ಆಡಳಿತ ಮಂಡಳಿ ಅನುಪಸ್ಥಿತಿಯಲ್ಲಿ ಇಂಥದ್ದೊಂದು ಗಟ್ಟಿ ನಿಲುವು ತೆಗೆದುಕೊಂಡು ಲೀಲಾವಿಗೆ ಮುಂದಾಗಿರುವುದು ಪಾಲಿಕೆಯ ಇತಿಹಾಸದಲ್ಲಿ ಬಹು ದೊಡ್ಡ ಬೆಳವಣಿಗೆಯಾಗಿದೆ.

ಈಗಾಗಲೇ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಪಾಲಿಕೆಯು ಅತ್ಯಂತ ಶಿಸ್ತು ಬದ್ಧವಾಗಿ ಯೋಜನೆ ರೂಪಿಸಿದ್ದು, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಮತ್ತೆ ಮರುಚಾಲನೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಹು-ಧಾ ಮಹಾನಗರ ಪಾಲಿಕೆ ಆದಾಯಕ್ಕೆ ಹಾಗೂ ಮತ್ತಷ್ಟು ಅಭಿವೃದ್ಧಿಗೆ ಮಾರ್ಗವಾದಂತಾಗಿದ್ದು,ಹೊಸ ಹರಾಜು ಪ್ರಕ್ರಿಯೆಯಿಂದ ಮತ್ತಷ್ಟು ಆರ್ಥಿಕ ಸಂಚಲನ ಸೃಷ್ಟಿಯಾಗಲಿದೆ.

Edited By : Manjunath H D
Kshetra Samachara

Kshetra Samachara

05/11/2020 10:01 pm

Cinque Terre

51.27 K

Cinque Terre

1

ಸಂಬಂಧಿತ ಸುದ್ದಿ