ಅಣ್ಣಿಗೇರಿ: ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತಾಲೂಕಿನ ಗ್ರಾಮಗಳಲ್ಲಿ ರೈತ ಬೆಳೆದ ಬಿಟಿ ಹತ್ತಿ ಬೆಳೆ ಸಂಪೂರ್ಣವಾಗಿ ನೀರು ಪಾಲಾಗಿದ್ದು, ಕೈಗೆ ಸಿಗಬೇಕಾದ ಹತ್ತಿ ಕೈ ತಪ್ಪಿದೆ. ರೈತನಿಗೀಗ ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈ ಇಟ್ಟು ಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ.
ಇತ್ತ ಕಡೆ ಸರ್ಕಾರ ನೀಡುತ್ತಿರುವ ಬೆಳೆ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ ಎಂಬುದು ರೈತರ ದೊಡ್ಡ ಅಳಲಾಗಿದೆ. ಇನ್ನೂ ಕೆಲವೊಂದು ಭಾಗಗಳಲ್ಲಿ ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ಬೆಳೆ ಪರಿಹಾರದಲ್ಲಿ ಸರ್ಕಾರ ಸ್ವಲ್ಪ ಉದಾರತೆ ತೋರಿದರೆ ರೈತರಿಗೆ ಅದೇ ದೊಡ್ಡ ಉಪಕಾರವಾಗುತ್ತದೆ ಎಂಬುದು ರೈತರ ವಿನಯಪೂರ್ವಕ ಕೋರಿಕೆ.
Kshetra Samachara
13/10/2022 10:26 pm