ಹುಬ್ಬಳ್ಳಿ; ಭಾರತೀಯ ರೈಲ್ವೆ ಇಲಾಖೆಯು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ಮತ್ತಷ್ಟು ಜನಹಿತ ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವಲ್ಲಿ ಚಿಂತನೆ ನಡೆಸಿದ್ದು,ಕೆಲವೊಂದು ಸಾಮಾನ್ಯ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತನೆ ಮಾಡುವ ಹಾಗೂ ವೇಗವನ್ನು ಹೆಚ್ಚಿಸುವ ನಿರ್ಧಾರಕ್ಕೆ ಮುಂದಾಗಿದೆ.
360 ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸುವ ಬಗ್ಗೆ ಈಗಾಗಲೇ ರೈಲ್ವೆ ಇಲಾಖೆ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದು, ದೇಶಾದ್ಯಂತ ಚಲಿಸುತ್ತಿರುವ 360 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.
ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಮಾರ್ಪಡಿಸುವುದರಿಂದ ಯಾವುದೇ ರೀತಿಯ ನಿಲ್ದಾಣಗಳ ಹಾಗೂ ಉಪ-ನಗರ ಅಥವಾ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಸಾರಿಗೆ ಸೌಲಭ್ಯವನ್ನು ಕಸಿದುಕೊಳ್ಳುವುದಿಲ್ಲ.ಅಲ್ಲದೇ ಕೆಲವೊಂದು ನಿಲ್ದಾಣಗಳಲ್ಲಿ ಯಾವೊಬ್ಬ ಪ್ರಯಾಣಿಕರು ಹತ್ತುವುದು ಇಳಿಯುವುದನ್ನು ಮಾಡದೇ ಇದ್ದಲ್ಲಿ ಅಂತಹ ನಿಲ್ದಾಣಗಳ ನಿಲುಗಡೆಯನ್ನು ರದ್ದು ಮಾಡುವ ಕುರಿತು ರೈಲ್ವೇ ಇಲಾಖೆ ತೀರ್ಮಾನ ಕೈಗೊಳ್ಳಲಿದೆ.
ಗ್ರಾಮೀಣ ಭಾಗದ ಜನರು ರೈಲ್ವೇ ಸೇವೆಯನ್ನು ಹೆಚ್ಚಾಗಿ ಅವಲಂಬಿಸಿದ್ದು,ಕರ್ನಾಟಕ ರಾಜ್ಯದ ಬಹುತೇಕ ಹಳ್ಳಿಗಳಿಗೆ ಜೀವನಾಡಿ ಸಾರಿಗೆ ವ್ಯವಸ್ಥೆಯಾಗಿದ್ದು,ವೇಗ ಹೆಚ್ಚಿಸುವ ಹಾಗೂ ಪ್ಯಾಸೆಂಜರ್ ರೈಲನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಮಾರ್ಪಡಿಸುವುದರಿಂದ ಸಮಸ್ಯೆ ಉಂಟಾಗುವುದಿಲ್ಲ.ಅಲ್ಲದೇ ಸಮಯ ಮತ್ತು ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kshetra Samachara
31/10/2020 04:31 pm