ಕುಂದಗೋಳ : ರೈತಾಪಿ ಚಟುವಟಿಕೆಗಳ ಕೈಗೊಳ್ಳಲು ಸಂಚಕಾರ ತಂದ ರಸ್ತೆ ಒಂದಾ ಎರೆಡಾ ಈ ಸರದಿ ಇನ್ನೂ ಬೆಳೆಯುತ್ತಲಿದ್ದು ಸ್ವತಃ ರೈತರೇ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ನೀಡಿ ರಸ್ತೆ ಪಡಿಸಿಕೊಡ್ರೀ ಎಂದು ಬೇಡಿಕೊಳ್ಳುತ್ತಿದ್ದಾರೆ.
ನೀವಿಲ್ಲಿ ನೋಡುತ್ತಿರುವ 6 ಕಿ.ಮೀ ಹೊಸಕೇರಿ ರಸ್ತೆ ಹೀಗೆ ಮಣ್ಣು ರಾಡಿ ನೀರು ತುಂಬಿಕೊಂಡು ಹಾಳಾಗಿದ್ದು ನಿತ್ಯ ಕೃಷಿ ಚಟುವಟಿಕೆ ಕೈಗೊಳ್ಳವ ಸುಲ್ತಾನಪುರ, ಹರ್ಲಾಪುರ, ಪಶುಪತಿಹಾಳದ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ರೈತರು ಸ್ವಾಮಿ ನಮ್ಮೂರು ರಸ್ತೆ ಸರಿಪಡಿಸಿ ಎಂದು ಅಂಗಲಾಚುತ್ತಿದ್ದಾರೆ.
ಈ ರಸ್ತೆಗೆ ಹೊಂದಿಕೊಂಡಂತೆ ಸುಲ್ತಾನಪುರ, ಹರ್ಲಾಪುರ ಗ್ರಾಮಗಳ 1500 ಕ್ಕೂ ಅಧಿಕ ಹೇಕ್ಟರ್ ಹೊಲಗಳಿದ್ದು ಹೊಲದಲ್ಲಿ ಬೆಳೆದಿರುವ ಬೆಳೆಯನ್ನ ಮನೆಗೆ ಕೊಂಡ್ಯಯ್ಯಲು ಸೂಕ್ತ ರಸ್ತೆ ಇಲ್ಲದೆ ಮಳೆಗಾಲದಲ್ಲಿ ರೈತರು ನಿತ್ಯವು ನರಕಯಾತನೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳು ಮನವಿ ಮಾಡಿದರೂ ಪರಿಹಾರ ಕಾಣದ ರೈತರು ಸದ್ಯ ರಸ್ತೆ ಸುಧಾರಣೆಗೆ ಮಾರ್ಗ ಕೇಳುತ್ತಿದ್ದಾರೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸಮಸ್ಯೆಯನ್ನ ಸ್ಥಳೀಯ ಜಿಲ್ಲಾ ಪಂಚಾಯತ ಸದಸ್ಯರ ಗಮನಕ್ಕೆ ತಂದಿದ್ದು ಅವರ ಪತಿ ಶಿವಾನಂದ ಬೆಂತೂರುರವರ ಗಮನಕ್ಕೆ ತಂದಿದ್ದು ಶೀಘ್ರದಲ್ಲೇ ರಸ್ತೆ ದುರಸ್ತಿ ಕಾರ್ಯ ಮಾಡುವ ಭರವಸೆ ನೀಡಿದ್ದಾರೆ.
Kshetra Samachara
14/10/2020 05:28 pm