ಅಳ್ನಾವರ: ಸೇನಾ ಭರ್ತಿಗೆಂದು ಅಸ್ಸಾಮ್‌ಗೆ ತೆರಳಿದ್ದ ಅಭ್ಯರ್ಥಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ ಬೀಡಕರ ಹೃದಯಾಘಾತದಿಂದ ಮೃತಪಟ್ಟ ಯುವಕ.
ಅಸ್ಸಾಮ್‌ನಲ್ಲಿ ಸೇನಾ ಭರ್ತಿಗಳು ಪ್ರಾರಂಭವಾಗಿದ್ದ ಬೆನ್ನಲ್ಲೇ ಸೇನೆಗೆ ಸೇರುವ ಉದ್ದೇಶದಿಂದ ದರ್ಶನ್ ಎಂಬ ಈ ಯುವಕ ಸೇನಾ ಭರ್ತಿಗೆಂದು ಅಸ್ಸಾಂ ಗೆ ತೆರಳಿದ್ದಾನೆ.ದೈಹಿಕ ಪರೀಕ್ಷೆಯ ವೇಳೆ ಅಂದರೆ ರನ್ನಿಂಗ್ ನಲ್ಲಿ ಓಡುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಏನಾಗಿದೆ ಎಂದು ನೋಡುವಷ್ಟರಲ್ಲೇ ಹೃದಯಾಘಾತದಿಂದ ದರ್ಶನ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ದರ್ಶನ್ ಪಾರ್ಥಿವ ಶರೀರವನ್ನು ನಿನ್ನೆ ತಡರಾತ್ರಿ ಸ್ವಗ್ರಾಮ ಅರ್ಲವಾಡಕ್ಕೆ ತರಲಾಗಿದೆ. ಮಾರ್ಗ ಮಧ್ಯ ಗ್ರಾಮಸ್ಥರಿಂದ ಭಾರತ್ ಮಾತಾ ಕಿ ಜೈ, ದರ್ಶನ್ ಅಮರ್ ರಹೇ ಎಂಬ ಭಾವನಾತ್ಮಕ ಘೋಷಗಳು ಮೊಳಗಿದವು. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Kshetra Samachara
09/10/2022 09:22 am