ಹುಬ್ಬಳ್ಳಿ: ಪರಿಸರ ಉಳಿಸಿ ಬೆಳೆಸುವ ಉದ್ದೇಶದಿಂದ ಸಾವಿರ ಸಸಿ ನೆಡುವ ಕಾರ್ಯಕ್ರಮ, ಆ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದ ಯುವ ಉತ್ಸಾಹಿ ವಿದ್ಯಾರ್ಥಿಗಳ ಬಳಗ, ಉದಯಗಿರಿ ನಗರದ ರಸ್ತೆಯುದ್ದಕ್ಕೂ ಭೂತಾಯಿಯ ಒಡಲು ಹೊಕ್ಕು ಹಸಿರು ಸಸಿಗಳು ವಿದ್ಯಾರ್ಥಿಗಳ ಕೈಯಲ್ಲಿ ಹಾರಾಡಿದ ತ್ರಿವರ್ಣ ಧ್ವಜಗಳು.
ಎಸ್.! ಇಷ್ಟೆಲ್ಲ ಅಭೂತಪೂರ್ವ ಕ್ಷಣಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳ ಹುಮ್ಮಸ್ಸಿಗೆ ಕಾರಣವಾದದ್ದೇ ಕಾಂಗ್ರೆಸ್ ಮುಖಂಡ ಆರ್.ಕೆ.ಪಾಟೀಲ್ ಅವರ ಸಾವಿರ ಸಸಿ ನೆಡುವ ಯುವ ಜನೋತ್ಸವ ಕಾರ್ಯಕ್ರಮ.
ಆಜಾದಿ ಕಾ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧಾರಾನಗರಿಯ ಉದಯನಗರದ ಆರ್.ಕೆ ಪಾಟೀಲ್‌ರವರ ಫಾರ್ಮ್ ಹೌಸ್‌ನಲ್ಲಿ ವಿದ್ಯಾರ್ಥಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳ ನಡುವೆ ಗಣ್ಯಾತಿಗಣ್ಯರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿ ಅವರ ನೇತೃತ್ವದಲ್ಲೇ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಇನ್ನು ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಉತ್ಸಾಹ ಎಲ್ಲೆ ಮೀರಿ ಪ್ರತಿಧ್ವನಿಸಿದರೆ ಒಂದು ಕಿಲೋಮೀಟರ್ ದಾರಿಯನ್ನು ಭಾರತದ ತ್ರಿವರ್ಣ ಧ್ವಜ ಹಿಡಿದು ಕ್ರಮಿಸಿದ ವಿಧ್ಯಾರ್ಥಿಗಳು ಭಾರತ ಜಾಥಾವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಕೆ ಪಾಟೀಲ, ಕೆಸಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭ ಕುಮಾರ್ (ಐಎಫ್ಎಸ್), ಎಪಿಎಂಸಿ ಅಧ್ಯಕ್ಷ ಚನ್ನು ಹೊಸಮನಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪಾಯುಕ್ತ ಜಿ.ಬಿ.ಗೌಡಪ್ಪಗೋಳ, ಶಿಕ್ಷಣ ತಜ್ಞ ಶ್ರೀನಿವಾಸ ತಿಮ್ಮನಗೌಡರ, ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ, ಡಾ.ಶಿವರಾಮ್ ಪಾಟೀಲ, ಎಸ್.ಬಿ ಸಣ್ಣಗೌಡರ ಉಪಸ್ಥಿತರಿದ್ದರು.
Kshetra Samachara
12/08/2022 10:18 pm