ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯತೆ ಮೆರೆದ ಚಿಕ್ಕೋಡಿಯ ಮೀಸೆ ಮಾವ!

ಬೆಳಗಾವಿ-ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅಪಘಾತಕ್ಕೀಡಾದ ವ್ಯಕ್ತಿಯ ಕಷ್ಟಕ್ಕೆ ಸ್ಥಳದಲ್ಲೇ ಸ್ಪಂದಿಸಿದ್ದಾರೆ.

ಬೆಳಗಾವಿ ಸಮೀಪದ ಹಿರೇಬಾಗೆವಾಡಿ ಬಳಿಯ ರಾಷ್ಟೀಯ ಹೆದ್ದಾರಿ 4ರಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಪಘಾತ ಸಂಭವಿಸಿತ್ತು.. ಆ ಸಮಯದಲ್ಲಿ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಯವರು ಬೆಳಗಾವಿಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಅಪಘಾತ ಆಗಿದ್ದನ್ನು ಕಂಡು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಕಳಿಸುವಂತೆ ಸೂಚಿಸಿದ್ರು.

ಆಂಬ್ಯುಲೆನ್ಸ್ ಬಂದು ಕರೆದುಕೊಂಡು ಹೋಗುವವರೆಗೂ ಸ್ಥಳದಲ್ಲೇ ನಿಂತಿದ್ದರು. ಮತ್ತು ಅಪಘಾತಕ್ಕೊಳಗಾದ ವ್ಯಕ್ತಿಗೆ 10 ಸಾವಿರ ರೂಪಾಯಿ ಧನ ಸಹಾಯ ನೀಡಿದರು. "ದವಾಖಾನಿ ಖರ್ಚಿಗೆ ಮತ್ತ ರೊಕ್ಕ ಬೇಕಾದ್ರ ನಮ್ಮ ಪಿಎಗೆ ಒಂದು ಫೋನ್ ಹಚ್ಚು" ಎಂದು ಹೇಳಿ ಅಲ್ಲಿಂದ ಮುಂದೆ ಸಾಗಿದ್ರು.

Edited By : Nagaraj Tulugeri
Kshetra Samachara

Kshetra Samachara

08/01/2021 04:32 pm

Cinque Terre

65.69 K

Cinque Terre

0

ಸಂಬಂಧಿತ ಸುದ್ದಿ