ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ದನ ಕರುಗಳಿಗೆ ತಪ್ಪದೆ ಹಾಕಿಸಿ ಲಸಿಕೆ ಕೊರೊನಾ ಅಲ್ಲಾ, ಕಂದುರೋಗ ಬಂದೈತಿ

ಕುಂದಗೋಳ : ಕುಂದಗೋಳ ತಾಲೂಕಿನ ರೈತಾಪಿ ಮಂದಿಗೆ ನಮಸ್ಕಾರ ನೋಡ್ರಿ, ನಿಮ್ಮ ಮನ್ಯಾಗ ಆಕಳು ಎಮ್ಮೆ ಹೆಣ್ಣು ಕರು ಇದ್ರ ಅವುಗಳು ಗರ್ಭ ಧರಿಸಿದ್ರೇ ನೀವೂ ಚಾಚು ಚಪ್ಪದೆ ನಿಮ್ಮ ಹತ್ತಿರದ ಪಶು ಆಸ್ಪತ್ರೆಗೆ ಹೋಗಿ ಭೇಟ್ಟಿ ಆಗ್ಬೇಕ್ ಮತ್ತ್ ನಿಮ್ಮ ಆಕಳು ಎಮ್ಮೆಗೆ ಕರುಗಳಿಗೆ ಲಸಿಕೆ ಹಾಕಸಬೇಕು ನಿಮೆಗೆಲ್ಲಾ ಗೊತ್ತಿರ್ಲಿ.

ಅರೆ.! ಇದೇನ್ರಿ ಕೊರೊನಾ ಅಂತ್ಹೇಳಿ ಬರೇ ಮನಶ್ಯಾರಿಗೆ ಅಷ್ಟ ಲಸಿಕೆ ಹಾಕತಿದ್ರ, ಈಗೇನ್ ದನಕ್ಕೂ ಲಸಿಕೆ ಅಂತೀರಿ, ಅಂತ್ಹೇಳಿ ಆಶ್ಚರ್ಯ ಪಡಬ್ಯಾಡ್ರೀ, ಅದಕ್ಕ ಕಾರಣ ಐತಿ. ಈ ಆಕಳು ಮತ್ತು ಎಮ್ಮೆಗೆ ಕಂದುರೋಗ ಅಂತ್ಹೇಳಿ ಕಾಯಿಲೆ ಬರಾಕತ್ತೇತಿ ಈ ಕಾಯಿಲೆ ಬಂತಂದ್ರ ಆಕಳು ಎಮ್ಮೆ ಗರ್ಭ ಧರಿಸೋದಿಲ್ಲ, ಮತ್ತ್ ಈಗಾಗಲೇ ಗರ್ಭ ಧರಿಸಿದ ಆಕಳಿಗೆ ಗರ್ಭ ಪಾತ ಅಕ್ಕೇತಿ ಇನ್ನೂ ಹೆಚ್ಚಾಗಿ ಈ ರೋಗ ಪ್ರಾಣಿಗಳಿಂದ ಮನಶ್ಯಾರಿಗೂ ಬರ್ತೇತಿ ಅಂತ್ ಕುಂದಗೋಳ ಪಶು ಆಸ್ಪತ್ರೆ ಡಾಕ್ಟರ್ ಹೇಳ್ಯಾರ.

ಕೇಳಿದ್ರಲ್ಲಾ ಡಾಕ್ಟರ್ ಹೇಳಿದ್ದೂ, ಈಗಾಗಲೇ ಕುಂದಗೋಳ ತಾಲೂಕಿನ 19 ಪಶುಪಾಲನಾ ಇಲಾಖೆಯಲ್ಲಿ ಕಂದು ರೋಗಕ್ಕೆ ಪ್ರೀ ಆಗಿ ನಾಲ್ಕ ರಿಂದ 8 ತಿಂಗಳ ಆಕಳು ಎಮ್ಮೆ ಕರಕ್ಕ ಲಸಿಕೆ ಹಾಕಕತ್ತಾರ ನೀವೂ ನಿಮ್ಮ ಎಮ್ಮೆ ಆಕಳಕ್ಕ ಲಸಿಕೆ ಹಾಕಸ್ರೀ, ಮತ್ತ್ ಈ ರೋಗ ಬಂದಿದ್ದು ಹೇಂಗ್ ಕಂಡು ಹಿಡಿದು ಅಂತಿರೇನು ? ಅದಕ್ಕ ಡಾಕ್ಟರ್ ಉತ್ತರ ಹೇಳ್ಯಾರ ನೋಡ್ರಿ.

ನೋಡ್ರಿ ಈ ದನ ಕರುಗಳಿಗೆ ಬರೋ ಕಂದುರೋಗದ ಹತೋಟಿಗಾಗಿ ತಪ್ಪದಂಗ ಲಸಿಕೆ ಹಾಕಸ್ರೀ ಈಗಾಗಲೇ ಕೊರೊನಾ ಎಷ್ಟ್ ಕೇಡು ಮಾಡೇತಿ ಅಂತ್ ನಿಮ್ಗೆ ನಮ್ಗ ಎಲ್ಲಾರಿಗೂ ಗೊತ್ತೈತಿ. ಈಗ ಪ್ರಾಣಿಗಳ ಸರದಿ ಚಾಲೂ ಆಗೇತಿ ತಪ್ಪದೆ ರಾಸುಗಳಿಗೂ ಲಸಿಕೆ ಹಾಕಿಸಿ ಕಂದುರೋಗದ ಬಗ್ಗೆ ಎಚ್ಚರ ವಹಿಸಿ.

ಶ್ರೀಧರ ಪೂಜಾರ,

ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

08/09/2021 04:49 pm

Cinque Terre

67.21 K

Cinque Terre

0

ಸಂಬಂಧಿತ ಸುದ್ದಿ