ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಬಾಲ್ಯದಿಂದಲೇ ಸೈಕಲ್‌ನ್ನು ಇಷ್ಟಪಟ್ಟು ಇಳಿವಯಸ್ಸಿನಲ್ಲೂ ಯುವಕರು ನಾಚುವಂತೆ ದಿನಕ್ಕೆ 20 ಕಿ.ಮೀ ಸೈಕ್ಲಿಂಗ್ ಮಾಡುತ್ತಾ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೇ.
ಹೌದು, ಹೀಗೇ ಸೈಕ್ಲಿಂಗ್ ಹಾಗೂ ಯೋಗ ಮಾಡುತ್ತಿರುವವರ ಹೆಸರು ಡಾ. ಲಿಂಗರಾಜ ಅಂಗಡಿ, ಹುಬ್ಬಳ್ಳಿ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ ಇವರು, ಸದ್ಯ 59 ವಯಸ್ಸಿನಲ್ಲೂ ದಿನಕ್ಕೆ 20ಕಿ.ಮೀ ಸೈಕಲ್ ತುಳಿಯುತ್ತಾ, ಹಲವಾರು ಬಗೆಯ ಯೋಗಗಳನ್ನು ಮಾಡುವುದರ ಮುಖಾಂತರ ಯುವಕರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಯುವಕರು ದುಷ್ಟ ಚಟಕ್ಕೆ ಒಳಗಾಗದೆ ಪ್ರತಿದಿನ ಆ್ಯಕ್ಟಿಬ್ ಆಗಿರಲು ದೇಹ ಶ್ರಮಿಸಿಬೇಕೆಂದು ಮಾಡುವಂತೆ ಮನವಿ ಮಾಡಿದ್ದಾರೆ.....
ಡಾ. ಲಿಂಗರಾಜ ಅಂಗಡಿಯವರನ್ನು ನೋಡಿದ ಅದೆಷ್ಟೋ ಯುವಕರು, ಇವರಂತೆ ವ್ಯಾಯಾಮ,ಸೈಕ್ಲಿಂಗ್, ರನ್ನಿಂಗ್, ಹಾಗೂ ಯೋಗ ಮಾಡಲು ಮುಂದಾಗಿದ್ದು ವಿಶೇಷವಾಗಿದೆ. ಹುಬ್ಬಳ್ಳಿಯಿಂದ ಸೈಕ್ಲಿಂಗ್ ಮುಖಾಂತರ ಕುಸುಗಲ್ ರಸ್ತೆ,ಹಳ್ಯಾಳ್ ರಸ್ತೆ ಮೂಲಕ ತೆರಳಿ ಹೊಲದಲ್ಲಿ ಅಥವಾ ರಸ್ತೆ ಪಕ್ಕ ಯುವಕರಿಗೆ ವ್ಯಾಯಾಮ, ಯೋಗವನ್ನು ಹೇಳಿಕೊಡುತ್ತಾರೆ.
ಇನ್ನು ಡಾ. ಲಿಂಗರಾಜ ಅಂಗಡಿ ಅವರ ಸಾಮಾಜಿಕ ಮತ್ತು ಆರೋಗ್ಯ ಕಾಳಜಿ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈಗಿನ ಯುವ ಪೀಳಿಗೆಯು ಮೊಬೈಲ್ ಗೆಮ್ ಎಂದು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದನ್ನು ಬಿಟ್ಟು, ಆರೋಗ್ಯವೇ ಭಾಗ್ಯ ಎಂದು ಜಾಗೃತಿಯ ಜೊತೆಗೆ ಕಾಳಜಿ ವಹಿಸುತ್ತಿರುವ ಡಾ ಲಿಂಗರಾಜ ಅಂಗಡಿಯವರು ಎಲ್ಲರಿಗೂ ಮಾದರಿಯಾಗಿದ್ದಾರೆ.....!
Kshetra Samachara
26/09/2020 07:32 pm