ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ವಿನೂತನವಾಗಿ ಕಾರ್ಗಿಲ್ ವಿಜಯ ದಿವಸ್ ಆಚರಿಸುವ ಮೂಲಕ ನಿರಾಮಯ ಫೌಂಡೇಶನ್ ವತಿಯಿಂದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಹೌದು.. ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಚಾಲನೆ ನೀಡಿದ್ದು, ವಿಜಯ ದಿವಸ ಮತ್ತು ಅಮೃತ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಸೈನಿಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ದೇಶವನ್ನು ರಕ್ಷಿಸಲು ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನಲ್ಲಿರುವ ಧಾನ, ಧರ್ಮ ಮಾಡುವ ಮೂಲಕ ಪ್ರಕೃತಿ ಹಾಗೂ ಭಾಷೆ ಉಳಿಸುವ ಕಾಯಕ ಮಾಡಬೇಕಾಗಿದೆ. ಪ್ರತಿ ಮನೆ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಿಸುವಂತಾಗಬೇಕು ಎಂದ ಸಾತ್ಯಕಿ ಸಾವರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೂ ಆರ್.ಎಸ್.ಎಸ್. ದಕ್ಷಿಣ ಕ್ಷೇತ್ರದ ಪ್ರಜ್ಞಾ ಪ್ರವಾಹ ರಘುನಂದನ, ಗದಗದ ಬೃಹನ್ಮಠ ಸದಾಶಿವಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಬಾಳಿಕಾಯಿ ಮತ್ತಿತರರ ಉಪಸ್ಥಿತಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು.
Kshetra Samachara
26/07/2022 03:12 pm