ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೋವಿಡ್ ಬೆಡ್ ಮೀಸಲಿಡಿ: ಆಸ್ಪತ್ರೆಯವರಿಗೆ ಡಿಸಿ ಸೂಚನೆ

ಧಾರವಾಡ: ರಾಜ್ಯ ಸರ್ಕಾರವು ಜನೇವರಿ 4 ರಂದು ಹೊರಡಿಸಿರುವ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 31 ನೋಂದಾಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆ (ಜ.7)ಯಿಂದ ಶೇ.30 ರಷ್ಟು ಹಾಗೂ ಜನೇವರಿ 10 ರಿಂದ ಶೇ.50 ರಷ್ಟು ಬೆಡ್ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ಸೊಂಕಿತರ ಚಿಕಿತ್ಸೆಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಈ ಕುರಿತು ಇಂದು ಸಂಜೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಆನಲೈನ್ ವೆಬೆಕ್ಸ್ ಮೂಲಕ ಸಭೆ (ವಿಡಿಯೋ ಸಂವಾದ) ಜರುಗಿಸಿ ಅವರು ಮಾತನಾಡಿದರು.

ಆಸ್ಪತ್ರೆಗಳು ಹೊಂದಿರುವ ಐಸಿಯು, ಎಚ್‍ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್‍ಗಳಲ್ಲಿ ನಾಳೆಯಿಂದ ಶೇ.30 ರಷ್ಟು ಹಾಗೂ ಜನೇವರಿ 10 ರಿಂದ ಶೇ.50 ರಷ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಕಡ್ಡಾಯವಾಗಿ ಮೀಸಲಿಡಬೇಕು. ಈ ಕುರಿತು ಪರಿಶೀಲಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಈ ಮೂರನೇ ಅಲೆ ಸಂದರ್ಭದಲ್ಲೂ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದರು.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿತ ಪ್ರಕರಣಗಳ ದರ ಹತ್ತು ದಿನಗಳಿಗೊಮ್ಮೆ ಎರಡುಪಟ್ಟು (ಡಬಲ್) ಹೆಚ್ಚಾಗುತ್ತಿತ್ತು. ಆದರೆ ತಜ್ಞರು ತಿಳಿಸಿರುವಂತೆ ಈ ಮೂರನೇ ಅಲೆಯಲ್ಲಿ ಡಬ್ಲಿಂಗ್ ದರ ಎರಡರಿಂದ ಮೂರು ದಿನಗಳಾಗಿದೆ. ಈಗ ಸೋಂಕು ಬೇಗನೆ ವ್ಯಾಪಕವಾಗಿ ಹರಡುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ, ಸ್ಯಾನಿಟೈಸರ್ ಬಳಸಬೇಕು. ಈ ಕುರಿತು ಎಲ್ಲ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಇತರ ವ್ಯಾಪಾರ ಸ್ಥಳಗಳಲ್ಲಿ ಜಾಗೃತಿ ವಹಿಸಬೇಕೆಂದು ಅವರು ತಿಳಿಸಿದರು.

ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಾಗಿ ತಪ್ಪದೇ ಮಾಸ್ಕ್ ಧರಿಸಿ ಹೊಗುವಂತೆ ಜಾಗೃತಿ ವಹಿಸಬೇಕು ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸುವಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Edited By : Nagaraj Tulugeri
Kshetra Samachara

Kshetra Samachara

06/01/2022 08:06 pm

Cinque Terre

23.89 K

Cinque Terre

4

ಸಂಬಂಧಿತ ಸುದ್ದಿ