ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ 67 ವಿದ್ಯಾರ್ಥಿಗಳು, ಸಿಬ್ಬಂದಿ

ನವಲಗುಂದ : ನವಲಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಹಾಗೂ ಧಾರವಾಡ ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಐ.ಕ್ಯೂ.ಎ.ಸಿ, ಎನ್.ಎಸ್.ಎಸ್ ಯುವ ರೆಡ್ ಕ್ರಾಸ್ ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕಗಳ ಸಹಯೋಗದೊಂದಿಗೆ ಒಟ್ಟು 67 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 9 ಕ್ಕೆ ಆರಂಭವಾದ ಶಿಬಿರ ಸಂಜೆ 4 ರವರೆಗೆ ಜರುಗುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮೆಡಿಕಲ್ ಆಫೀಸರ್, ರೋಟರಿ ಬ್ಲಡ್ ಬ್ಯಾಂಕ್ ಧಾರವಾಡ ಡಾ. ನಂದೀಶ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ನವಲಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ ಬಾಗಡೆ ವಹಿಸಿಕೊಳ್ಳುವರು.

ಈ ಸಂದರ್ಭದಲ್ಲಿ ಪ್ರೊ.ಬಸವರಾಜ ಸೂಡಿ, ಪ್ರೊ.ವಿನಾಯಕ, ಮಿರಜಕಾರ, ಪ್ರೊ.ಮಹಾನಂದಾ ಹಿರೇಮಠ್, ಡಾ ಡಿ.ವಿ ಸುಗುಣಾ, ಪ್ರೊ ಎಂ.ಎಂ ಲಸ್ಕರ್, ಪ್ರೊ ಸಂತೋಷ ಹುಬ್ಬಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/07/2022 03:19 pm

Cinque Terre

10.53 K

Cinque Terre

0

ಸಂಬಂಧಿತ ಸುದ್ದಿ