ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಮ್ಸ್: ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ

ಹುಬ್ಬಳ್ಳಿ: ಕಿಮ್ಸ್ ಸಂಸ್ಥೆಯಲ್ಲಿ ಇಂದು 10 ನೇ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆಯನ್ನು ಆಚರಿಸಲಾಯಿತು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್ ಫಾರ್ಮಸಿ ಅಧಿಕಾರಿಗಳ ತಂಡ ಕ್ರೀಯಾಶೀಲವಾಗಿದ್ದು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅವಶ್ಯವಿರುವ ಹೊಸ ಔಷಧಿ ಅಥವಾ ತುರ್ತು ಔಷಧಿಗಳನ್ನು ಶೀಘ್ರವಾಗಿ ವ್ಯವಸ್ಥೆ ಮಾಡುತ್ತಿದೆ . ಕೋವಿಡ್ -19 ಪಿಡುಗು ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಅವಶ್ಯವಿರುವ ಔಷಧಿ , ಪರಿಕರಗಳನ್ನು ಕೊರತೆಯಾಗದಂತೆ ದಾಸ್ತಾನು ನಿರ್ವಹಿಸಿದ ಸ್ಟೋರ್ ವಿಭಾಗದ ಅಧಿಕಾರಿ ಡಾ.ರಾಜಶೇಖರ ದ್ಯಾಬೇರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿಷ್ಠಿತ ಕಿಮ್ಸ್ ಸಂಸ್ಥೆಗೆ ಒಂದು ಸುಸಜ್ಜಿತ ಮಾದರಿ ಔಷಧಿ ಉಗ್ರಾಣದ ಅವಶ್ಯಕತೆ ಇದ್ದು ಅದನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು .

ಸ್ಪೋರ್ ಇನ್ ಚಾರ್ಜ ಆಫೀಸರ ಡಾ.ರಾಜಶೇಖರ ದ್ಯಾಬೇರಿ ಮಾತನಾಡಿ, ಕಳೆದ ಫೆಬ್ರುವರಿ ತಿಂಗಳಿನಿಂದಲೂ , ಸಂಸ್ಥೆಯ ಎಲ್ಲಾ ಫಾರ್ಮಸಿ ಅಧಿಕಾರಿಗಳು ಮತ್ತು ಅವರ ತಂಡ ಹಗಲಿರುಳು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದು, ಕೋವಿಡ್ ರೋಗಿಗಳಿಗೆ ಅವಶ್ಯವಿರುವ ಜೀವರಕ್ಷಕ ಔಷಧಿಗಳು ಆಕ್ಸಿಜನ್ ಪೂರೈಕೆ ಮತ್ತು ಚಿಕಿತ್ಸಾ ತಂಡಕ್ಕೆ ಬೇಕಾಗುವ ಎನ್ -95, ಪಿ.ಪಿ.ಇ ಕಿಟ್, ಇತರೆ ಪರಿಕರಗಳ ಯಾವುದೇ ಕೊರತೆಯಾಗದಂತೆ, ದಾಸ್ತಾನು ನಿರ್ವಹಿಸುತ್ತಾ ಬಂದಿರುತ್ತಾರೆ. ಇಲ್ಲಿಯವರೆಗೆ ಒಟ್ಟು 43.33 ರೆಮೆಡಿಸವಿರ್ ವೈಲಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಉಚಿತವಾಗಿ ವಿತರಿಸಿದ್ದು , ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ರೆಮೆಡಿಸವಿರ್‌ ಬಳಕೆ ಮಾಡಿ ಗರಿಷ್ಠ ಪ್ರಮಾಣದಲ್ಲಿ ಕೋವಿಡ್ ರೋಗಿಗಳ ಪ್ರಾಣ ಉಳಿಸಲಾಗಿದೆ. ಜಿಲ್ಲಾಡಳಿತ ಕಿಮ್ಸ್ ಸಂಸ್ಥೆಗೆ ಎಲ್ಲಾ ಸಹಕಾರ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೋರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಕೆಲಸ ನಿರ್ವಹಿಸಿರುವ ಎಲ್ಲ ಫಾರ್ಮಸಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು .

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಅರುಣಕುಮಾರ ಚವ್ಹಾಣ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ , ಉಪ ವೈದ್ಯಕೀಯ ಅಧೀಕ್ಷಕ ಡಾ.ಎಸ್ .ವೈ. ಮುಲ್ಕಿ ಪಾಟೀಲ , ಡಾ. ಜಾನಕಿ ತೋರವಿ , ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ಸಿದ್ದೇಶ್ವರ ಕಟಕೋಳ , ವಿಭಾಗದ ಮುಖ್ಯಸ್ಥರಾದ ಡಾ . ಆಶಾ ಪಾಟೀಲ , ಡಾ .ಈಶ್ವರ ಹಸಬಿ , ಡಾ.ಕಸ್ತೂರಿ ಡೋಣಿಮಠ , ಹಾಗೂ ಜಿಲ್ಲಾ ಔಷಧಿ ನಿಯಂತ್ರಕರಾದ ಮಲ್ಲಿಕಾರ್ಜುನ ಮತ್ತು ಸಹಾಯಕ ಔಷಧ ನಿಯಂತ್ರಕ ಅಜಯ್ ಮುದಗಲ್ ಮತ್ತಿತರರು ಹಾಜರಿದ್ದರು.

Edited By :
Kshetra Samachara

Kshetra Samachara

25/09/2020 07:28 pm

Cinque Terre

13.25 K

Cinque Terre

0

ಸಂಬಂಧಿತ ಸುದ್ದಿ