ಹುಬ್ಬಳ್ಳಿ: ಅವು ಸುಮಾರು ಎರಡು ವರ್ಷಗಳ ಕಾಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತ ಆಮೆ ವೇಗದಲ್ಲಿ ನಡೆದುಕೊಂಡು ಬಂದಿರುವ ಉದ್ಯಮಗಳು. ಕಿಲ್ಲರ್ ಕೊರೋನಾ ಹಾವಳಿಯಿಂದ ಸಂಪೂರ್ಣ ಬಂದ್ ಆಗಿದ್ದ ಉದ್ಯಮಗಳು. ಕಿಲ್ಲರ್ ಕೊರೋನಾ ಹಾವಳಿ ತಗ್ಗಿದ್ದರೂ ಕೂಡ ನೈಟ್ ಕರ್ಫ್ಯೂ ಅಂತಹ ನಿರ್ಧಾರಗಳಿಂದ ಬಲಿಪಶುಗಳಾಗುತ್ತಿವೆ. ಹಾಗಿದ್ದರೇ ಏನಿದು ಸಮಸ್ಯೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಕಿಲ್ಲರ್ ಕೊರೋನಾ ಹಾವಳಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ, ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ ಮಾಡಿತ್ತು. ಅಲ್ಲದೇ ಜನರು ಕೂಡ ಸರ್ಕಾರದ ನಿರ್ಧಾರಕ್ಕೆ ಮೂಖ ಬಸವಣ್ಣನಂತೆ ತಲೆ ಆಡಿಸಿ ನಡೆಸಿಕೊಂಡು ಬಂದಿದ್ದರು. ಆದರೆ ಈಗ ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವ್ ರೇಟ್ ಹಾಗೂ ಡೆತ್ ರೇಟ್ ಸಂಪೂರ್ಣ ತಗ್ಗಿದ್ದರೂ ಕೂಡ ನೈಟ್ ಕರ್ಫ್ಯೂ ನಿರ್ಧಾರದಿಂದ ಹೊಟೇಲ್ ಉದ್ಯಮ, ವಾಣಿಜ್ಯೋದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಪಾಸಿಟಿವ್ ರೇಟ್ ಜಾಸ್ತಿ ಇದ್ದ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಅವಶ್ಯಕತೆ ಇದೆ. ಆದರೆ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದಿದ್ದರೂ ಕೂಡ ನೈಟ್ ಕರ್ಫ್ಯೂ ಜಾರಿಯಲ್ಲಿರುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ವಾಣಿಜ್ಯೋದ್ಯಮಿಗಳ ಮಾತು..
ಇನ್ನೂ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿರುವ ಹೋಟೆಲ್ ಹಾಗೂ ವಾಣಿಜ್ಯೋದ್ಯಮಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ನೈಟ್ ಕರ್ಫ್ಯೂ ಸಡಿಲಿಕೆ ಮಾಡಿ ನಮಗೂ ಕೂಡ ಬದುಕಲು ಅವಕಾಶ ಮಾಡಿಕೊಡಿ ಎಂದು ಹೊಟೇಲ್ ಮಾಲೀಕರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಅಲ್ಲದೇ 9 ಗಂಟೆಗೆ ನೈಟ್ ಕರ್ಫ್ಯೂ ಇದ್ದರೂ ಜನರು ಮಾತ್ರ ಸಂಜೆಯಿಂದ ಹೊಟೇಲ್ ಬಳಿಗೆ ಸುಳಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ನೈಟ್ ಕರ್ಫ್ಯೂ ಸಡಿಲಿಕೆ ಮಾಡಿ ಹೊಟೇಲ್ ಹಾಗೂ ವಾಣಿಜ್ಯೋದ್ಯಮಗಳ ಬೆಳವಣಿಗೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
Kshetra Samachara
15/09/2021 05:13 pm