ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಕ್ತುಮಹುಸೇನ್ ಗೃಹ ಪ್ರವೇಶ; ಹರಿದು ಬಂತು ಜನರ ಶುಭ ಸಂದೇಶ

ಹುಬ್ಬಳ್ಳಿ: ಸದ್ಗುಣಗಳ ಫಲ, ಉತ್ತಮ ಕೆಲಸದ ಪ್ರತಿಫಲ, ಸಾಮಾಜಿಕ ಕಾರ್ಯಗಳ ಮೂಲಕವೇ ಎಲ್ಲರಲ್ಲಿ ಒಬ್ಬರಾಗಿ ಗುರುತಿಸಿಕೊಂಡು ತಮ್ಮ ಮನಸ್ಸಿನಂತೆ ನಿರ್ಮಲ ಆಲಯ ಕಟ್ಟಿದ ಮಕ್ತಮಹುಸೇನ್ ಬುಡ್ಡೆಸಾಬ್ ಬಡಿಗೇರ ಗೃಹ ಪ್ರವೇಶ ಅದ್ದೂರಿಯಾಗಿ ಅದರಗುಂಚಿ ಗ್ರಾಮದ ಪ್ಲಾಟಿನಲ್ಲಿ ನೆರವೇರಿತು.

ಹೌದು. ಸದಾ ಸಾಮಾಜಿಕ ಕಾರ್ಯಗಳ ಮೂಲಕ ಮಿಡಿಯುವ ಮಕ್ತುಮಹುಸೇನ್ ಸ್ನೇಹಿತರಿಗೆ ಬಲು ಆಪ್ತರು, ಎಲ್ಲದಕ್ಕಿಂತ ಮಿಗಿಲಾಗಿ ಅವಿರೋಧವಾಗಿ ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಕ್ತುಮಹುಸೇನ್ ಗೃಹ ಪ್ರವೇಶಕ್ಕೆ ಜನರ ಸಾಗರ ಹರಿದು ಬಂದು ಶುಭ ಹಾರೈಕೆ ತಿಳಿಸಿ ಅವರ ಸಾಮಾಜಿಕ ಸೇವೆ ನೆನೆದರು.

ಕಷ್ಟದ ಹಾದಿಯನ್ನೇ ಸವೆಸಿ ನೋವುಗಳನ್ನೆ ನೆನೆದು ಇಂದು ಎಲ್ಲರಂತೆ ಬದುಕು ಕಟ್ಟಿಕೊಂಡು ಇಷ್ಟೋಂದು ಸುಂದರ ಆಲಯ ಕಟ್ಟಿದ ಮಕ್ತಮಹುಸೇನ್ ಜಾತಿ ಧರ್ಮ ಮತ ಎನ್ನದೇ ಎಲ್ಲರೂ ತನ್ನವರೇ ಎಂದು ಸರ್ವರ ಏಳ್ಗೆ ಪ್ರೀತಿ ವಿಶ್ವಾಸಕ್ಕೆ ಋಣಿಯಾದವರು, ಇವರ ಗೃಹ ಪ್ರವೇಶಕ್ಕೆ ಕಲಘಟಗಿ ಹನ್ನೇರೆಡುಮಠದ ರೇವಣಸಿದ್ದೇಶ್ವರ ಶಿವಾಚಾರ್ಯ, ಅಭಿನವ ಕಲ್ಯಾಣಪುರ ಬಸವಣ್ಣನವರು ಸೇರಿದಂತೆ ಎಲ್ಲ ಧರ್ಮದ ಗುರುಗಳು ಮೌಲಾನಾಗಳು ಬಂದು ಆಶೀರ್ವದಿಸಿ ಹಾರೈಸಿದರು.

ರಾಜಕೀಯ, ವ್ಯವಹಾರೋಧ್ಯಮದ ಬಂಧುಗಳು, ನಾಯಕರು ಸಹ ಆಗಮಿಸಿ ಮುಕ್ತುಮಹುಸೇನ್ ಗೃಹ ಪ್ರವೇಶಕ್ಕೆ ತಮ್ಮ ಹಾರೈಕೆ ತಿಳಿಸಿ, ಮಕ್ತಮಹುಸೇನ್ ಒಡನಾಟ ಜನ ಸಂಪರ್ಕ ಬಡವರ ಮಗನಾಗಿ ಬದುಕು ನಡೆಸಿ ಇಂದು ಬಡವರಿಗೆ ಆಶ್ರಯವಾದ ಸೇವೆಗೆ ಸೈ ಎಂದರು.

ಅದರಗುಂಚಿ ಪ್ಲಾಟ್‌ನಲ್ಲಿ ನಡೆದ ಮಕ್ತುಮಹುಸೇನ್ ಅವರ ಗೃಹ ಪ್ರವೇಶಕ್ಕೆ ಆಗಮಿಸಿದ ಸರ್ವರಿಗೂ ಸುಖ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅದಲ್ಲದೆ ಅದೆಷ್ಟೋ ಜನ ಜಂಗುಳಿ ಏರ್ಪಟ್ಟರು ಗೃಹ ಪ್ರವೇಶಕ್ಕೆ ಆಗಮಿಸಿದ ಎಲ್ಲರನ್ನೂ ಅಪ್ಪಿ ಅವರ ಅಭಿಮಾನ ಸ್ವೀಕರಿಸಿದ ಮಕ್ತುಮಹುಸೇನ್ ಪ್ರೀತಿ ಎಲ್ಲೇ ಮೀರಿತ್ತು.

ಒಟ್ಟಿನಲ್ಲಿ ತಂದೆ ಬುಡ್ಡೇಸಾಬ್ ತಾಯಿ ರಹಮತಬಿ ಪತ್ನಿ ಸೈನಾಜಬೇಗಂ, ಸಹೋದರರಾದ ಗೌಸುಸಾಬ್, ಹಜರೇಸಾಬ್ ಅವರ ಸಹಕಾರದಲ್ಲಿ ಗೃಹ ನಿರ್ಮಿಸಿದ ಮಕ್ತಮಹುಸೇನ್ ಅವರಿಗೆ ಒಡನಾಡಿ ಸ್ನೇಹಿತರು, ಬಂಧು ಬಳಗ, ಆಪ್ತ ಮಿತ್ರರು, ರಾಜಕೀಯ ಗಣ್ಯರು, ಸ್ವಾಮೀಜಿಗಳು, ಮೌಲಾನಗಳು ಶುಭ ಹಾರೈಸಿ ಗೃಹಪ್ರವೇಶ ದಿನವನ್ನು ನೆನಪಿಡುವಂತೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

29/08/2022 05:14 pm

Cinque Terre

104.41 K

Cinque Terre

3