ಹುಬ್ಬಳ್ಳಿ: ದೇಶದೆಲ್ಲೆಡೆ ಕೃಷ್ಣ ಹುಟ್ಟಿದ ದಿನವಾದ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ವಿಶೇಷವಾಗಿ ಮಥುರಾ, ವೃಂದಾವನ ಮತ್ತು ದ್ವಾರಕಾದಲ್ಲಿ ಈ ಆಚರಣೆ ತುಸು ಜೋರಾಗಿತ್ತು. ಅದೇ ರೀತಿ ಪಬ್ಲಿಕ್ ನೆಕ್ಸ್ಟ್ ಈ ಹಬ್ಬದ ಸಂತೋಷವನ್ನು ನಮ್ಮ ಓದುಗರು ಇಮ್ಮಡಿಗೊಳಿಸಿದ್ದಾರೆ.
ನಮ್ಮ ಮಾಧ್ಯಮದ ಓದುಗರಿಗೆ ತಮ್ಮ ಮುದ್ದು ಮಕ್ಕಳನ್ನು ಕೃಷ್ಣ, ಯಶೋಧೆಯಂತೆ ಶೃಂಗರಿಸಿ ಆ ಫೋಟೋವನ್ನು ಕಳುಹಿಸಲು ಸೂಚಿಸಲಾಗಿತ್ತು. ಅದೇ ರೀತಿ ಸಾವಿರಾರು ಜನ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ನಮ್ಮ ಮಾಧ್ಯಮಕ್ಕೆ ಕಳುಹಿಸಿದ್ದಾರೆ. ಫೋಟೋ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.
ಸದ್ಯ ಬಂದಿರುವ ಸಾವಿರಾರು ಫೋಟೋಗಳಲ್ಲಿ ಮುದ್ದು ಮೂವರನ್ನು ಹುಡುಕುವುದು ನಿಜಕ್ಕೂ ಬಲು ಕಷ್ಟ ಎಲ್ಲ ಮಕ್ಕಳು ಸುಂದರವಾಗಿಯೇ ಇದ್ದಾರೆ. ಆದರೆ ಸ್ಪರ್ಧೆ ಎಂದಾಗಿರುವ ಕಾರಣ ಮೊದಲನೆ ಬಹುಮಾನವನ್ನು ಹುಬ್ಬಳ್ಳಿಯ ಉಣಕಲ್ ನಿವಾಸಿ ಸುಪ್ರಿಯಾ ಕೋಟಿ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಹರ್ಷಾಲ್ ಲದ್ವಾ, ತೃತೀಯ ಸ್ಥಾನವನ್ನು ಹಾವೇರಿಯ ಸಿದ್ಧಾರ್ಥ ಪವಾರ್ ಪಡೆದಿದ್ದು, ಸನ್ಮಿತಾ ಕೋಪದ ಹಾಗೂ ಮೇಘಾ ಹಿರೇಮಠ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಬಹುಮಾನ ವಿಜೇತ ಎಲ್ಲ ಮಕ್ಕಳಿಗೆ ಪಬ್ಲಿಕ್ ನೆಕ್ಸ್ಟ್‌ನಿಂದ ಅಭಿನಂದನೆಗಳು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/08/2022 08:18 pm