ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ BASS ವತಿಯಿಂದ ಆಮಂತ್ರಣ

ನವಲಗುಂದ : ಸಾಲು ಮರದ ತಿಮ್ಮಕ್ಕರವರ 111ನೇ ಹುಟ್ಟುಹಬ್ಬದ ನಿಮಿತ್ತ ಜೂನ್ 30ರಂದು ಬೆಂಗಳೂರಿನಲ್ಲಿ ಭಾರತೀಯ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ನವಲಗುಂದದ ಅಯ್ಯಪ್ಪ ಗುರುಸ್ವಾಮಿ ಅವರನ್ನು ಆಮಂತ್ರಿಸಲು ಆಗಮಿಸಿದ ಭಾರತೀಯ ಅಯ್ಯಪ್ಪ ಸೇವಾ ಸಂಘದ ಸದಸ್ಯರು ಪಟ್ಟಣದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಆಮಂತ್ರಣ ಪತ್ರ ನೀಡಿದರು.

ನಂತರ ಸುಮಾರು ನಾಲ್ಕು ತಿಂಗಳ ಹಿಂದೆ ನವಲಗುಂದ ಪಟ್ಟಣದ ಹೊರವಲಯದ ಶಲವಡಿ ರಸ್ತೆಯಲ್ಲಿನ ವಾಲ್ಮೀಕಿ ಭವನದ ಬಳಿಯ ಮಾಜಿ ಸಚಿವ ಕೆ.ಎನ್ ಗಡ್ಡಿ ಅವರು ಹದಿನೈದು ಗುಂಟೆ ಜಾಗವನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕಾಗಿ ದಾನ ನೀಡಿದ್ದರು. ಈ ಸ್ಥಳದ ವೀಕ್ಷಣೆಯನ್ನು ಮಾಡಿದರು.

ಈ ಸಂಧರ್ಭದಲ್ಲಿ ಮೋಹನ ಗುರುಸ್ವಾಮಿ, ಶಿವಾನಂದ ಬಾರ್ಕಿ ಗುರುಸ್ವಾಮಿ, ನಿಂಗಪ್ಪ ಗುರುಸ್ವಾಮಿ, ಮನಮೋಹನ ಆನೆಗುಂದಿ, ದಯಾನಂದ, ಹುಚ್ಚಪ್ಪ ತೇರದಾಳ ಸೇರಿದಂತೆ ಸುಮಾರು 30 ಜನ ಇದ್ದರು.

Edited By : PublicNext Desk
Kshetra Samachara

Kshetra Samachara

22/06/2022 07:04 pm

Cinque Terre

12.55 K

Cinque Terre

0