ಧಾರವಾಡ: ಬಿ.ಇಡಿ ಅರ್ಜಿ ಹಾಕಲು ಘಟಿಕೋತ್ಸವ ಪ್ರಮಾಣಪತ್ರ ಕಡ್ಡಾಯ ಮಾಡಿರುವುದರಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಮಾಣಪತ್ರ ಪಡೆದುಕೊಳ್ಳಲು ಅಭ್ಯರ್ಥಿಗಳು ಪರದಾಡಿದ ಪ್ರಸಂಗ ನಡೆಯಿತು.
ಒಬ್ಬ ಅಭ್ಯರ್ಥಿಯ ಪ್ರಮಾಣಪತ್ರವನ್ನು ತೆಗೆಯಬೇಕಾದರೆ ಕನಿಷ್ಠ 10 ನಿಮಿಷ ಬೇಕಾಗುತ್ತದೆ. ಗುರುವಾರ ಎಲ್ಲಾ ಅಭ್ಯರ್ಥಿಗಳು ಏಕಕಾಲಕ್ಕೆ ಬಂದಿದ್ದರಿಂದ ಗೊಂದಲವಾಗಿದೆ ಎಂದು ಕವಿವಿ ಮೂಲಗಳು ತಿಳಿಸಿವೆ.
ಪ್ರಮಾಣಪತ್ರ ನೀಡುವಂತೆ ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದರಿಂದ ಕವಿವಿಯಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯೆ ಪ್ರವೇಶಿಸಿದ ಪೊಲೀಸರು ಎಲ್ಲರೂ ಶಾಂತಿಯಿಂದ ಇರಬೇಕು. ಎಲ್ಲರಿಗೂ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಭ್ಯರ್ಥಿಗಳ ಮನವೊಲಿಸಿದರು. ರಾತ್ರಿವರೆಗೂ ಅಭ್ಯರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಿಸಲಾಗಿದೆ.
Kshetra Samachara
07/10/2022 08:31 am