ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಒಂಟಿ ಕಾಲಲ್ಲಿ ಕಾಯ್ದರೂ ಬಾರದ ಸರ್ವರ್; ಹೊಟ್ಟೆಗೆ ಬಟ್ಟೆ

ಕುಂದಗೋಳ : ಸರ್ಕಾರ ಕೊಟ್ಟ ಅನ್ನಭಾಗ್ಯ ಹಸಿದವರ ಹೊಟ್ಟೆಗೆ ಬೀಳಬೇಕಾದರೆ ಪಡಿತರ ಸಾಮಗ್ರಿ ತರಲು ಪ್ರತಿ ತಿಂಗಳು ಒಂಟಿ ಕಾಲಲ್ಲಿ ನಿಂತು ಸರ್ವರ್'ಗಾಗಿ ಕಾಯುವ ದುಸ್ಥಿತಿಗೆ ಯಾರಿಂದಲೂ ಉತ್ತರವೇ ಸಿಗದಾಗಿದೆ.

ಹೌದು... ಆಹಾರ ಇಲಾಖೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಪಡಿತರ ಸಾಮಗ್ರಿ ಪಡೆಯಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಉಂಟಾಗಿದೆ. ಪಡಿತರ ಚೀಟಿ ಯದಾರರು ನ್ಯಾಯಬೆಲೆ ಅಂಗಡಿ ಎದುರು ದಿನವಿಡಿ ಕಾದು ಪಡಿತರ ಸಾಮಗ್ರಿ ಸಿಗದೆ ಅಧಿಕಾರಿಗಳಿಗೆ ಛೀ ತೂ ಎನ್ನುತ್ತಿದ್ದಾರೆ.

ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡದಾರರ ಹೆಬ್ಬೆರಳು ಗುರುತು ಪಡೆದು ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ಬದಲಾಗಿ, ಇತ್ತಿಚ್ಚೆಗೆ ಎರಡು ಸಾರಿ ಓಟಿಪಿ ಇಲ್ಲವೇ ಹೆಬ್ಬೆರಳು ನೀಡುವ ವ್ಯವಸ್ಥೆಯನ್ನು ಸರ್ಕಾರ ತಂದಿದೆ, ಆದರೆ ಇದಕ್ಕೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಪದೇ ಪದೇ ಕೈಕೊಡುತ್ತಿದ್ದು ಪಡಿತರ ಸಾಮಗ್ರಿ ವಿತರಣೆಗೆ ನ್ಯಾಯಬೆಲೆ ಅಂಗಡಿಕಾರರು, ಗ್ರಾಹಕರು ಪರದಾಡುತ್ತಿದ್ದಾರೆ.

ಇನ್ನೂ ಬಡವರು , ಕೂಲಿ ಕಾರ್ಮಿಕರು ದೈನಂದಿನ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಕಾಯುವ ಸ್ಥಿತಿ ಎದುರಾಗಿದೆ. ಇದಲ್ಲದೆ ಹೊಸ ರೇಷನ್ ಕಾರ್ಡ್ ತಿದ್ದುಪಡಿ, ಹೊಸಬರನ್ನು ಕಾರ್ಡಿಗೆ ಸೇರಿಸುವುದು, ಅಥವಾ ತೆಗೆದುಹಾಕುವ ಯಾವುದೇ ಕೆಲಸ ಕುಂದಗೋಳ ತಹಶೀಲ್ದಾರ ಕಚೇರಿಯ ಪಡಿತರ ವಿತರಣಾ ವಿಭಾಗದಲ್ಲಿ ಸದ್ಯ ಲಭ್ಯವಿಲ್ಲದಾಗಿದೆ.

ಕಳೆದ ಜೂನ್ ತಿಂಗಳಿಂದ ಸರ್ವರ್ ಕೈ ಕೊಟ್ಟಿದ್ದು ಕುಂದಗೋಳ ಪಡಿತರ ವಿಭಾಗದಲ್ಲಿ 1080 ಅರ್ಜಿ ವಿಲೇವಾರಿ ಆಗದೆ ಉಳಿದಿದ್ದು ಸರ್ವರ್ ಇಲ್ಲಾ ಎಂಬ ಕಥೆ ಸಾಮಾನ್ಯವಾಗಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Nagesh Gaonkar
Kshetra Samachara

Kshetra Samachara

29/09/2022 06:47 pm

Cinque Terre

31.59 K

Cinque Terre

1

ಸಂಬಂಧಿತ ಸುದ್ದಿ