ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಆಟಕ್ಕುಂಟು ಲೆಕ್ಕಕ್ಕಿಲ್ಲ ಸಾಮಾನ್ಯ ಸಭೆ, ಹೊರ ನಡೆದರೂ ಪಿಡಿಓ

ಕುಂದಗೋಳ: ಗ್ರಾಮಗಳ ಅಭಿವೃದ್ಧಿ ಹಾಗೂ ತಾಲೂಕಿನ ಏಳಿಗೆಯ ಕುರಿತು ಆಡಳಿತಾಧಿಕಾರಿ ಟಿ.ಸಿದ್ದಣ್ಣ ಅವರ ನೇತೃತ್ವದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗಿದೆ.

ಹೌದು! ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಾದ ಸಭೆಯಲ್ಲಿ ಸಂಶಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಕೊರತೆ ಚರ್ಚೆ, ತಾಲೂಕಿನ ಗ್ರಾಮಗಳ ಶ್ಮಶಾನ ಭೂಮಿ ಜಾಗ ಖರೀದಿ, ಚಾಕಲಬ್ಬಿ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಕುರಿತು ಚರ್ಚೆ ನಡೆದವು.

ಅದರಂತೆ ತಾಲೂಕಿನ ಕೇಂದ್ರ ಸ್ಥಾನದ ಅಧಿಕಾರಿಗಳು ತಾಲೂಕಿನಲ್ಲಿ ಹಾನಿಯಾದ ಬೆಳೆಗಳ ಮಾಹಿತಿ, ಅಂಗನವಾಡಿ ಶಾಲಾ ಕಟ್ಟಡಗಳ ದುರಸ್ತಿ, ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ತಾಡಪತ್ರಿ ವಿತರಣೆ ಕುರಿತು ಚರ್ಚೆ ನಡೆಯುವಾಗಲೇ ಇತ್ತ ಪಿಡಿಓಗಳು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಆದೇಶದಂತೆ ಗ್ರಾಮ ನೈರ್ಮಲ್ಯ ತರಬೇತಿಯ ಆನ್‌ಲೈ ಮಾಹಿತಿ ಕೇಳಲು ಸಭೆ ಬಿಟ್ಟು ಹೊರ ನಡೆದಿದ್ದು ಸಭೆಗೆ ಭಂಗ ತಂದಿತು. ಪಿಡಿಓ ಹೊರ ನಡೆದದ್ದೇ ತಡ ಸ್ವತಃ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಸಹ ಸಭೆಗೆ ತಡವಾಗಿ ಆಗಮಿಸಿ ಬೇಗನೆ ಹೊರ ನಡೆದರು.

ಇನ್ನೂ ಮೊದಲು ಆಸನ ಭರ್ತಿ ಆಗಿ ತಾರ್ಕಿಕ ಚರ್ಚೆ ನಡೆದಿದ್ದ ಸಭೆ ಪಿಡಿಓಗಳು ಹೋದ ಬಳಿಕ ಖಾಲಿ ಖಾಲಿ ಕುರ್ಚಿ ನಡುವೆ ಮೌಲ್ಯ ಕಳೆದುಕೊಂಡಿತು.

ತಾಲೂಕಿನ 27 ಪಿಡಿಓ ಪೈಕಿ 4 ಜನ, ತಾಲೂಕಿನ ಕೇಂದ್ರ ಸ್ಥಾನದ 30 ಅಧಿಕಾರಿಗಳ ಪೈಕಿ 3 ಜನ ಸಭೆಗೆ ಚಕ್ಕರ್ ಹಾಕಿದ್ದು ಸಭೆ ಕೇವಲ ನಿಯಮಕ್ಕೆ ಮಾತ್ರ ಎಂಬಂತೆ ಭಾಸವಾಯಿತು.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By :
Kshetra Samachara

Kshetra Samachara

15/09/2022 04:37 pm

Cinque Terre

21.81 K

Cinque Terre

0

ಸಂಬಂಧಿತ ಸುದ್ದಿ