ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ಖಾನೆ ಮಾಲೀಕನನ್ನು ಅಪಹರಿಸಿದ್ದವರ ಬಂಧನ: ಗೋಕುಲ ರೋಡ್ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ: ಟ್ರ್ಯಾಕ್ಟರ್ ಟ್ರೇಲರ್ ನಿರ್ಮಾಣಕ್ಕೆ ಮುಂಗಡವಾಗಿ ಲಕ್ಷಾಂತರ ರೂ. ಹಣ ಪಡೆದು ಟ್ರೇಲರ್ ಕೊಡದೇ ಸತಾಯಿಸುತ್ತಿದ್ದ ಕಾರ್ಖಾನೆ ಮಾಲೀಕನನ್ನೇ ಅಪಹರಿಸಿದ್ದ ಮಹಾರಾಷ್ಟ್ರ ಮೂಲದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗೋಕುಲ ಕೈಗಾರಿಕೆ ಪ್ರದೇಶದ ಕೃಷಿ ಇಂಪ್ಲಿಮೆಂಟ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಪರಶುರಾಮ ನೂಲ್ವಿ ಅಪಹರಣಕ್ಕೀಡಾಗಿದ್ದವರು. ಕೊಲ್ಲಾಪುರ ಜಿಲ್ಲೆಯ ಮುತ್ಸಾಲದ ಕೆಲವರು ಟ್ರ್ಯಾಕ್ಟರ್ ಟ್ರೇಲರ್ ತಯಾರಿಸಲು ಪರಶುರಾಮ ಅವರ ಫ್ಯಾಕ್ಟರಿಗೆ ಆರ್ಡರ್ ಕೊಟ್ಟಿದ್ದರು. ಇದಕ್ಕಾಗಿ ಮುಂಗಡವಾಗಿ ಹಣವನ್ನೂ ನೀಡಿದ್ದರು.

ಹಲವು ಬಾರಿ ಹುಬ್ಬಳ್ಳಿಗೆ ಬಂದು ಹೋಗಿದ್ದರೂ ಟೇಲರ್ ತಯಾರಿಸಿರಲಿಲ್ಲ. ಇದರಿಂದ ಬೇಸತ್ತು 7 ಜನರಿದ್ದ ತಂಡ ಪರಶುರಾಮ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು. ಅಪಹರಣದ ಕುರಿತು ಫ್ಯಾಕ್ಟರಿಯವರು ಗೋಕುಲ ರೋಡ್ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಕೂಡಲೇ ಕಾರ್ಯಪ್ರವೃತ್ತರಾದರು. ಬೆಳಗಾವಿ ಗಡಿ ಭಾಗದ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್ ಪೊಲೀಸರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಅವರ ಸಹಾಯದಿಂದ ಆರೋಪಿತರನ್ನು 3 ಗಂಟೆಯೊಳಗೆ ಬಂಧಿಸಿ, ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.

Edited By : Somashekar
Kshetra Samachara

Kshetra Samachara

21/07/2022 01:59 pm

Cinque Terre

13.56 K

Cinque Terre

4

ಸಂಬಂಧಿತ ಸುದ್ದಿ