ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ಬರೆ ಎಳೆದ ಅಧಿಕಾರಿಗಳು

ಅಳ್ನಾವರ: 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಎಂಬುದು ಸರ್ಕಾರದ ಅತ್ಯಂತ ಮಹತ್ವದ ಕನಸು. ಜಿಲ್ಲಾಧಿಕಾರಿಗಳ ಜೊತೆಗೆ ಎಲ್ಲ ವಿಭಾಗದ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೆಡೆ ಸೇರಿ, ರೈತರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಸಂಕಷ್ಟದಲ್ಲಿರುವವರಿಗೆ, ವಿಶೇಷವಾಗಿ ರೈತರಿಗೆ ಸ್ಥಳದಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ದೊರಕಲಿ ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಇಂದು ನಡೆದ ಅಳ್ನಾವರ ತಾಲೂಕಿನ ಬೆನಚಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅದ್ಯಾಕೋ ಕಳೆಗುಂದಿದ ವಾತಾವರಣದಿಂದಲೇ ನಿರ್ಮಾಣಗೊಂಡಿತ್ತು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ರೂವಾರಿಯಾಗಿದ್ದವರು ಅಳ್ನಾವರ ತಾಲೂಕು ತಹಶೀಲ್ದಾರ್ ರಾದ ಅಮರೇಶ ಪಮ್ಮಾರ.

ಸಸಿ ನೆಟ್ಟು, ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ, ಬೆನಚಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಮೊದಲ ಭೇಟಿ ನೀಡಿದರು. ನ್ಯಾಯಬೆಲೆ ಅಂಗಡಿಯಲ್ಲಿ ಇರುವ ಧಾನ್ಯಗಳನ್ನು ಪರಿಶೀಲಿಸಿದ ನಂತರ ಅಲ್ಲಿಯೇ ಸಾರ್ವಜನಿಕರು ಅಭಿಮಾನದಿಂದ ಮೈಸೂರು ಪೇಟ ತೊಡಿಸಿ, ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಅಲ್ಲಿಂದ ಕೋಲು, ಹಲಗೆ ಸದ್ದಿನ ಮೂಲಕ ಬರಮಾಡಿಕೊಂಡ ಗ್ರಾಮಸ್ಥರು 'ಗ್ರಾಮ್ ಒನ್ ಇಂಡಿಯಾ ನಾಗರಿಕ ಸೇವಾ ಕೇಂದ್ರ'ವನ್ನು ಉದ್ಘಾಟಿಸಿ, ಅಲ್ಲಿಂದ ಶಾಲಾ ಆವರಣದಲ್ಲಿ ಸಜ್ಜಾಗಿದ್ದ ವೇದಿಕೆ ಏರಿ ದೀಪ ಬೆಳಗಿಸಿ 'ಗ್ರಾಮ ವಾಸ್ತವ್ಯದ ಕಾರ್ಯಕ್ರಮ'ಕ್ಕೆ ಚಾಲನೆ ನೀಡಿದರು.

ತಹಶೀಲ್ದಾರ್ ಅವರು ಕಾರ್ಯಕ್ರಮ ಪ್ರಾರಂಭವಾದ ಕೇವಲ ಹತ್ತೇ ನಿಮಿಷಕ್ಕೆ ಕಾರ್ಯದ ನಿಮಿತ್ಯ ಬೇರೆಡೆ ತೆರಳುವುದಿದೆ ಎಂದು ಅಲ್ಲಿಂದ ಹೊರಟು ಹೋದರು.ಇನ್ನುಳಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸ್ಥಳದಲ್ಲಿ ಯಾರಿಗೂ ಪರಿಹಾರ ದೊರಕದೆ ಇರುವುದು ಬೇಸರದ ಸಂಗತಿ. ಸಾರ್ವಜನಿಕ ರ ಪ್ರಶ್ನೆಗೆ ಸಮಾಧಾನ ದ ಉತ್ತರ ದೊರಕಿತಷ್ಟೇ.ಗ್ರಾಮ ವಾಸ್ತವ್ಯದ ಕನಸು ನನಸಾಗದೆ ಗ್ರಾಮ ಸಭೆ ತರಹ ಭಾಸವಾಗಿದ್ದಂತೂ ಸತ್ಯ.

Edited By : Vijay Kumar
Kshetra Samachara

Kshetra Samachara

21/03/2022 10:37 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ