ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನವೆಂಬರ್ 1ರ ಒಳಗೆ ಅನ್ಯಭಾಷೆ ನಾಮಫಲಕ ತೆರವುಗೊಳಿಸಲು ಒತ್ತಾಯ

ಕಲಘಟಗಿ: ನವೆಂಬರ್ 1 ರ ಒಳಗೆ ಅನ್ಯಭಾಷೆ ನಾಮಫಲಕ ತೆರವುಗೊಳಿಸಿ ಕನ್ನಡ ನಾಮ ಫಲಕವನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಸಂಗ್ರಾಮ ಸೇನೆ ತಾಲೂಕಾ ಘಟಕದಿಂದ ಪಟ್ಟಣ ಪಂಚಾಯಿತಿಗೆ ಮನವಿ ನೀಡಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ ಜಿ ಗದ್ದಿಗೌಡರಗೆ ಮನವಿ ಸಲ್ಲಿಸಿ ಸಂಗ್ರಾಮ‌ ಸೇನೆ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ,ಪಟ್ಟಣದ ಎಲ್ಲ ಅಂಗಡಿಗಳು,ಹೋಟೆಲ್‌,ಬ್ಯಾಂಕ್ ಗಳು,ಕಚೇರಿ ಹಾಗೂ ಸರಕಾರಿ ಇಲಾಖೆಯ ನಾಮ ಫಲಕಗಳು ಕನ್ನಡದಲ್ಲಿಯೇ ಇರುವಂತೆ ಕಡ್ಡಾಯಗೊಳಿಸಬೇಕು, ಇಲ್ಲದೇ ಇದ್ದರೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು. ಕೆಲವೊಂದು ರಾಷ್ಟ್ರೀಯ ಬ್ಯಾಂಕಿನಲ್ಲಿ ನೌಕರರು ಹಿಂದಿ,ಇಂಗ್ಲಿಷ್ ಮಾತನಾಡುವುದರಿಂದ ಗ್ರಾಮೀಣ ಭಾಗದ ಜನರಿಗೆ ವ್ಯವಹರಿಸಲು ತೀವ್ರ ತೊಂದರೆಯಾಗುತ್ತಿದೆ ಕಾರಣ ಇಂತಹ ನೌಕರರನ್ನು ವರ್ಗಾವಣೆ ಮಾಡಿ ಕನ್ನಡ ಭಾಷೆ ಮಾತನಾಡುವವರಿಗೆ ಆದ್ಯತೆ ನೀಡಬೇಕು ಎಂದರು.

ಸಂಗ್ರಾಮ ಸೇನೆ ತಾಲ್ಲೂಕ ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ, ಸೌಮ್ಯ ನಾಯಕಿ,ನಾಗರಾಜ ತಮ್ಮಣ್ಣವರ,ಶಿವಾನಂದ ಓಲೇಕಾರ,ಬಸವರಾಜ ಗಣೇಶಪ್ಪನವರ,ಸುಭಾಸ ಕಂಪ್ಲಿಕೊಪ್ಪ ಹಾಗೂ ಪದಾಧಿಕಾರಿಗಳು ಇದ್ದರು.

Edited By : Manjunath H D
Kshetra Samachara

Kshetra Samachara

15/10/2021 08:22 pm

Cinque Terre

20.64 K

Cinque Terre

4

ಸಂಬಂಧಿತ ಸುದ್ದಿ