ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅನಧಿಕೃತ ಕಟ್ಟಡ ತೆರೆವು ಫಲಿಸಿತು ಹೈಕೋರ್ಟ್, ಡಿಸಿ ಆದೇಶ

ಕುಂದಗೋಳ : ಪಟ್ಟಣದ ನ್ಯಾಯಲಯ ಆವರಣದ ಸುತ್ತ ಜಾಗ ಅತಿಕ್ರಮಿಸಿಕೊಂಡು ನಿರ್ಮಿಸಿದ ಕಟ್ಟಡ ಹಾಗೂ ತಹಶೀಲ್ದಾರ ಕಚೇರಿ ಕಾಂಪೌಂಡ್ ಹೊಂದಿಕೊಂಡಿದ್ದ ಡಬ್ಬಾ ಅಂಗಡಿಗಳನ್ನು ಹೈಕೋರ್ಟ್ ಆದೇಶ ಮೇರೆಗೆ ಭಾನುವಾರ ತೆರವುಗೊಳಿಸಲಾಯಿತು.

ನ್ಯಾಯಾಲಯದ ಸೇರಿದ ಪಟ್ಟಣದ ಸರ್ವೇ ನಂಬರ್ 406 ರ 2 ಎಕರೆ ಜಾಗದ ಪಕ್ಕದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇದಲ್ಲದೆ ತಹಶೀಲ್ದಾರ ಕಚೇರಿಯ ಎದುರಿಗೆ ಡಬ್ಬಾ ಅಂಗಡಿಗಳ ತೆರವಿನ ಬಗ್ಗೆ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಲಾಗಿದ್ದು ಹೈಕೋರ್ಟ್ ಅನಧಿಕೃತ ಅಂಗಡಿಗಳ ತೆರವಿಗೆ ಗ್ರೀನ್ ಸಿಗ್ನಲ್ ನೀಡಿತ್ತು.

ಅದರಂತೆ ಈ ಬಗ್ಗೆ ಹಿಂದೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಹ ತಹಶೀಲ್ದಾರ ಕಚೇರಿ ಸುತ್ತ ನಿರ್ಮಿಸಿದ ಅಂಗಡಿಗಳ ತೆರವಿಗೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ಹೈಕೋರ್ಟ್ ಆದೇಶ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಡಬ್ಬಾ ಅಂಗಡಿ ಹಾಗೂ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಗೊಂದಕರ್, ತಹಶೀಲ್ದಾರ ಬಸವರಾಜ ಮೆಳವಂಕಿ, ಪೊಲೀಸ್ ಇನ್ಸಪೆಕ್ಟರ್ ಬಸವರಾಜ ಕಲ್ಲಮ್ಮನವರ ಹಾಗೂ ಕಂದಾಯ ನಿರೀಕ್ಷಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿ ಮಾಡಿದರು.

ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

08/02/2021 02:27 pm

Cinque Terre

26.69 K

Cinque Terre

2

ಸಂಬಂಧಿತ ಸುದ್ದಿ