ಕುಂದಗೋಳ : ಕೋವಿಡ್ ನಿಯಮಾನುಸಾರ ಸರ್ಕಾರದ ನಿರ್ದೇಶನ ಇಲ್ಲದ ಕಾರಣ ಬಂದ್ ಆಗಿದ್ದ ಕುಂದಗೋಳ ಸಂತೆ ರೈತಾಪಿ ಜನರು ಹಾಗೂ ವ್ಯಾಪಾರಿಗಳು ಒತ್ತಾಯದಿಂದ ಮತ್ತೆ ಇಂದು ಜಬರ್ದಸ್ತ್ ಆಗಿಯೇ ನಡೆಯಿತು.
ಆದ್ರೇ ಎಂದಿನಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಸಂತೆ ರದ್ದಾಗಿದೆ ಯಾರು ಸಂತೆ ಹಚ್ಚಬೇಡಿ ಎಂದು ಧ್ವನಿವರ್ಧಕಗಳ ಮೂಲಕ ಸುತ್ತಾಟ ನಡೆಸಿ ಮಾಹಿತಿ ಕೊಟ್ಟಿದ್ದು ಹೊಳೆಯಲ್ಲಿ ಹೋಮ ಮಾಡಿದಂತಾಗಿದ್ದು ಈ ಕಳೆದೆರೆಡು ವಾರ ಆರಂಭದಲ್ಲಿ ಅಷ್ಟೇನೂ ಗದ್ದಲದ ವಾತಾವರಣ ಕಾಣದ ಸಂತೆ ಈ ವಿಜಯದಶಮಿ ಹಬ್ಬದ ನಿಮಿತ್ತ ಇಂದು ಜನ ಸಮೂಹಕ್ಕೆ ಸಾಕ್ಷಿಯಾಗಿತ್ತು.
ಒಟ್ಟಾರೆ ನಿರ್ದೇಶನ ಬಾರದಿದ್ರೂ ಹೊಟ್ಟೆಗೆ ಬರ ಬೀಳುತೆಂಬ ಕಾರಣಕ್ಕೆ ಅತ್ಯಂತ ಸರಾಗವಾಗಿ ಮೊದಲಿನಂತೆಯೇ ಸಂತೆ ಸಕ್ಸಸ್ ಆಗಿದ್ದು ಹಳ್ಳಿಗರು ಅಷ್ಟೇ ಪ್ರಮಾಣದಲ್ಲಿ ಸಂತೆ ಸೇರಿದ್ದು ಇನ್ಮುಂದೆ ಇದೇ ಲಕ್ಷಣ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.
Kshetra Samachara
22/10/2020 11:49 am