ಸರ್ಕಾರಿ ಅಧಿಕಾರಿಗಳ ಕರ್ತವ್ಯದ ಸಮಯ ಶಿಸ್ತುಪಾಲನೆ ಮಾಡಬೇಕಾದ ಬಯೋಮೆಟ್ರಿಕ್ ವ್ಯವಸ್ಥೆ ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ಮೂಲೆಗುಂಪಾಗಿದೆ.
ಹೌದು ! ನಿತ್ಯ ಸಾವಿರಾರು ಕೆಲಸದ ನಿಮಿತ್ತ ಸರ್ಕಾರಿ ಕಚೇರಿ ಅರಸಿ ಬರುವ ಸಾರ್ವಜನಿಕರಿಗೆ ಅಗತ್ಯ ಸಮಯಕ್ಕೆ ಅಧಿಕಾರಿಗಳು ಸಿಗೋದೆ ಡೌಟು ! ಇನ್ನೂ ಅಧಿಕಾರಿಗಳ ಸಮಯ ಶಿಸ್ತು ಪಾಲನೆ ಕಾಯುವ ಬಯೊಮೇಟ್ರಿಕ್ ವ್ಯವಸ್ಥೆ ಸಹ ಸ್ಥಗಿತಗೊಂಡಿದದ್ದು, ಜನರಲ್ಲಿ ಸಂಶಯಕ್ಕೆ ಕಾರಣವಾಗಿದೆ.
ತಹಶೀಲ್ದಾರ ಕಚೇರಿಯ ಕಂದಾಯ ಇಲಾಖೆ ಬಯೊಮೇಟ್ರಿಕ್ ತಾಂತ್ರಿಕ ದೋಷದ ಕಾರಣ ಕಿತ್ತಿಡಲಾಗಿದೆ, ಸಬ್‌ರಿಜಿಸ್ಟ್ರಾರ್ ಕಚೇರಿಯ ಬಯೊಮೆಟ್ರಿಕ್‌ಗೆ ವಿದ್ಯುತ್ ಸಂಪರ್ಕವೇ ಇಲ್ಲ. ಇನ್ನು ಮುಖ್ಯವಾಗಿ ಭೂ ಮಾಪನಾ ನಿರ್ದೇಶಕರ ಕಚೇರಿಗೆ ಇಂದಿಗೂ ಬಯೊಮೇಟ್ರಿಕ್ ವ್ಯವಸ್ಥೆ ತಲುಪಿಯೇ ಇಲ್ಲ. ಇವೆಲ್ಲ ಅಂಶ ಗಮನಿಸಿದ್ರೇ ತಾಲೂಕು ದಂಡಾಧಿಕಾರಿ ಕಚೇರಿಯಲ್ಲೇ ಅಧಿಕಾರಿಗಳ ಸಮಯ ಶಿಸ್ತು ಪಾಲನೆ ಹೇಗೆ? ಎನ್ನುವ ಪ್ರಶ್ನೆ ಜನರದ್ದಾಗಿದೆ.
ನಿತ್ಯ ತಹಶೀಲ್ದಾರ ಕಚೇರಿಯಲ್ಲಿ ಜನ ಅಧಿಕಾರಿಗಳ ದಾರಿ ಕಾಯುತ್ತಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿಗಳು ರಿಜಿಸ್ಟರ್ ಬುಕ್ ಸಹಿ ಮಾಡುತ್ತಾರಾ ? ಯಾವಾಗ ಮಾಡ್ತಾರೆ ಈ ಮೇ ತಿಂಗಳ ಪುಸ್ತಕ ಎಲ್ಲಿದೆ ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ದೂರವಾಗಿದೆ. ಒಟ್ಟಾರೆ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ನಾಣ್ನುಡಿಯನ್ನು ಸರ್ಕಾರಿ ಅಧಿಕಾರಿಗಳು, ಹೊರಗುತ್ತಿಗೆ ನೌಕರರು ಮರೆಯದಂತೆ ತಹಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಎಚ್ಚರಿಸಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
01/06/2022 04:12 pm