ಧಾರವಾಡದ ವಾರ್ತಾ ಇಲಾಖೆ ಕಟ್ಟಡದ ನೆಲಮಹಡಿಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿ ಬಂದ್ ಆಗಿ ಅನೇಕ ತಿಂಗಳುಗಳೇ ಕಳೆದಿದ್ದವು. ಸಚಿವರ ಜನಸಂಪರ್ಕ ಕಚೇರಿ ಇಲ್ಲದ್ದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಈ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನೂ ಪ್ರಸಾರ ಮಾಡಿತ್ತು. ಇದೀಗ ಅದೇ ವಾರ್ತಾ ಇಲಾಖೆ ನೆಲಮಹಡಿ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿಯಲ್ಲಿ ಪುನರಾರಂಭಿಸಲಾಗಿದೆ.
ಮಂಗಳವಾರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಕಚೇರಿಯನ್ನು ಉದ್ಘಾಟಿಸಿದರು. ಇನ್ನು ಮುಂದೆ ವಿವಿಧ ಕೆಲಸಕ್ಕಾಗಿ ಸಚಿವರ ಬಳಿ ಬರುವ ಸಾರ್ವಜನಿಕರು ಈ ಕಚೇರಿಯ ಸದುಪಯೋಗಪಡಿಸಿಕೊಳ್ಳಬಹುದು.
Kshetra Samachara
21/06/2022 12:57 pm