ನವಲಗುಂದ: ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತತ್ತರಿಸಿದ ರೈತರು ಸೋಮವಾರ ನವಲಗುಂದ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಆಗಮಿಸಿ, ಬೆಳೆ ವಿಮೆಗಾಗಿ ಅರ್ಜಿಯನ್ನು ಸಲ್ಲಿಸಲು ಮುಗಿ ಬಿದ್ದಿದ್ದರು.
ಬೆಳೆ ವಿಮೆ ಮಾಡಿದಂತಹ ರೈತರ ಬೆಳೆ ಹಾನಿ ಸಂಭವಿಸಿದ್ದಲ್ಲಿ 72 ಗಂಟೆಗಳೊಳಗಾಗಿ ಸ್ಥಳೀಯ ವಿಪತ್ತಿನಡಿ ವಿಮೆ ಕಂಪನಿ ಅವರಿಗೆ ಮಾಹಿತಿ ನೀಡಲಾಗುತ್ತೆ, ನಂತರ ವಿಮೆ ಕಂಪನಿಯವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ.
ಸತತವಾಗಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೆಸರು, ಗೋವಿನ ಜೋಳ, ಮೆಣಸಿನಕಾಯಿ ಸೇರಿದಂತೆ ಮುಂಗಾರು ಬೆಳೆಗಳು ಹಾನಿಯಾಗಿದ್ದು, ಬಹುತೇಕ ಹಳ್ಳಿ ರೈತರೇ ಇಂದು ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಆಗಮಿಸಿದ್ದರು.
ಈಗಾಗಲೇ ಶುಕ್ರವಾರ, ಶನಿವಾರ ಹಾಗೂ ಸೋಮವಾರದವರೆಗೆ ನವಲಗುಂದ, ಅಣ್ಣಿಗೇರಿ, ಮೊರಬ ಸೇರಿ ಸುಮಾರು ಹತ್ತು ಸಾವಿರದ ಎರಡುನೂರು ಅರ್ಜಿ ಆಹ್ವಾನಿಸಲಾಗಿದೆ ಎಂದು ನವಲಗುಂದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀನಾಥ್ ಚಿಮ್ಮಲಗಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
08/08/2022 07:16 pm