ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಾದ್ಯಂತ ಮೇ.27ಕ್ಕೆ 3 ಶ್ಯಾನೆ ಹಿಂದಿ ಚಲನಚಿತ್ರ ಬಿಡುಗಡೆ

ಧಾರವಾಡ: ಧಾರವಾಡದವರೇ ಆದ ಚಲನಚಿತ್ರ ನಿರ್ದೇಶಕ ಅನೀಸ್ ಬಾರೂದವಾಲೆ ನಿರ್ದೇಶನದಲ್ಲಿ ಹಾಗೂ ಬೆಳಗಾವಿಯ ಸಂಜಯ ಸುನಾತಕರ ನಿರ್ಮಾಣದಲ್ಲಿ ಸಿದ್ಧಗೊಂಡಿರುವ ಹಾಸ್ಯಭರಿತ ಹಿಂದಿ ಭಾಷೆಯಲ್ಲಿರುವ 3 ಶ್ಯಾನೆ ಎಂಬ ಚಲನಚಿತ್ರವು ಮೇ.27ಕ್ಕೆ ದೇಶದಾದ್ಯಂತ ಬಿಡುಗಡೆಗೆ ಸಿದ್ಧಗೊಂಡಿದೆ.

ಈಗಾಗಲೇ ಚಿತ್ರದ ಟ್ರೈಲರ್ ಯುಟ್ಯೂಬ್ ನಲ್ಲಿ ಲಭ್ಯವಿದ್ದು, ಹೊಸ ಕ್ರೇಜ್ ಹುಟ್ಟು ಹಾಕಿದೆ. ವಿಶೇಷ ಎಂದರೆ ಈ ಚಿತ್ರಕ್ಕೆ ಧಾರವಾಡದ ಅನೀಸ್ ಅವರೇ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಬೆಳಗಾವಿಯ ಸಂಜಯ ಸುನಾತಕರ ಈ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ಎಸ್ಎಸ್ಎಸ್ ಪಿಲ್ಮ್ಸ್ ಇಂಟರನ್ಯಾಷನಲ್-333 ವತಿಯಿಂದ ಈ ಚಿತ್ರ ದೇಶಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಮುಮ್ಮಿಗಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಕ್ರಮ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಭರತ್ ಆರ್.ಪಿ. ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ತಾರಾಂಗಣದಲ್ಲಿ ಖ್ಯಾತ ಹಾಸ್ಯ ಕಲಾವಿದ ಆಸರಾಣಿ, ದೇವ ಶರ್ಮಾ, ಅನುಪ್ರಿಯಾ, ಲಕ್ಷ್ಮೀ ಖಾಟೋಚ, ಪ್ರಿಯಾಂಶು ಚಟರ್ಜಿ, ರಾಜೇಶ ಬೇಡಿ, ಅರ್ಜುಮನ್ ಮೊಘಲ್, ನಿಶಾಂತ ತನವಾರ, ಕುನಾಲ ಸಿಂಗ್, ರಾಜಯತ್ ಹೀನಾ ಪಂಚಾಲ ಅವರು ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು ಒಂದು ಹಾಸ್ಯಭರಿತ ಚಿತ್ರವಾಗಿದ್ದು ಕುಟುಂಬ ಸಮೇತ ನೋಡುವಂತಹ ಚಿತ್ರವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/05/2022 03:57 pm

Cinque Terre

154.59 K

Cinque Terre

0