ಧಾರವಾಡ: ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ನಾಳೆ ತೆರೆಗೆ ಅಪ್ಪಳಿಸಲಿದ್ದು, ಧಾರವಾಡದಲ್ಲಿ ಮುನ್ನಾ ದಿನವೇ ಟಿಕೆಟ್‌ಗಾಗಿ ಅಪ್ಪು ಅಭಿಮಾನಿಗಳು ಹರಸಾಹಸಪಡುತ್ತಿದ್ದಾರೆ.
ಪುನೀತ್ ರಾಜಕುಮಾರ್ ಇನ್ನಿಲ್ಲವಾಗಿ ಐದು ತಿಂಗಳು ಕಳೆದಿವೆ. ಆದರೆ, ಅವರ ಕೊನೆಯ ಚಿತ್ರ ಜೇಮ್ಸ್ ನಾಳೆ ದೇಶದಾದ್ಯಂತ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ತೆರೆಗೆ ಅಪ್ಪಳಿಸಲಿದೆ. ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ತೆರೆಗೆ ಬಂದಿದ್ದು, ಮುನ್ನಾ ದಿನವಾದ ಬುಧವಾರವೇ ಅಪ್ಪು ಅಭಿಮಾನಿಗಳು ಟಿಕೆಟ್‌ಗಾಗಿ ಧಾರವಾಡದ ಪದ್ಮಾ ಚಿತ್ರಮಂದಿರದ ಎದುರು ಜಮಾಯಿಸಿದ್ದರು.
ಪದ್ಮಾ ಚಿತ್ರಮಂದಿರದ ಎದುರು ಅಪ್ಪು ಕಟೌಟ್ ಹಾಕಿರುವ ಅಭಿಮಾನಿಗಳು 'ಅಪ್ಪು ನೀನು ಅಮರ' ಎಂಬ ವಾಕ್ಯವನ್ನು ಬರೆದು ಅಪ್ಪು ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಚಿತ್ರ ಬಿಡುಗಡೆ ಮುನ್ನಾ ದಿನವೇ ಇಷ್ಟೊಂದು ಕ್ರೇಜ್ ಹುಟ್ಟು ಹಾಕಿರುವ ಜೇಮ್ಸ್ ಚಿತ್ರ ಬಿಡುಗಡೆಯಾದ ನಂತರ ಎಷ್ಟೊಂದು ಕ್ರೇಜ್ ಹುಟ್ಟು ಹಾಕಲಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ
Kshetra Samachara
16/03/2022 06:51 pm