ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ ಕಲಿಕಾ ಚೇತರಿಕೆ ವರ್ಷಾಚರಣೆ

ಹುಬ್ಬಳ್ಳಿ:ಮಕ್ಕಳು ಪರೀಕ್ಷೆ ಬರೆದು ರಜಾ ದಿನಗಳನ್ನು ಕಳೆದು ಮೇ 16 ರಿಂದ ಶಾಲೆಗಳು ಮತ್ತೆ ಆರಂಭಗೊಂಡಿವೆ. ಕೋವಿಡ್ ನಿಂದಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಆದ ಕಾರಣ ಇಂದು ನಗರದ ಹೆಗ್ಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಚೇತರಿಕೆ ವರ್ಷವನ್ನು ಮಕ್ಕಳಿಗೆ ಹೂವು, ಸಿಹಿ, ಬುಕ್ಸ್, ಪೆನ್ ನೀಡುವುದರ ಮೂಲಕ ಶಾಲಾ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರುಗಳಾದ ಮೋತಿಲಾಲ್ ರಾಠೋಡ, ದೇವಾನಂದ ಹಿರೇಮಠ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಂಜೀವ ದುಮ್ಮಜಕನಾಳ, ರಾಜೇಶ್ವರಿ, ಪ್ರಶಾಂತ ಬಗಲಿ, ಎಸ್ ಡಿ ಎಮ್ ಸಿ. ಅಧ್ಯಕ್ಷರಾದ ಜ್ಯೊತಿ ರೋಖಡೆ,

ಎಂ.ಕೆ. ಅಕ್ಕಸಾಲಿಗರ, ಶಾಲಾ ಮಕ್ಕಳು ಹಾಜರಿದ್ದರು.

Edited By :
Kshetra Samachara

Kshetra Samachara

17/05/2022 09:17 am

Cinque Terre

44.51 K

Cinque Terre

1

ಸಂಬಂಧಿತ ಸುದ್ದಿ