ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಬಹುದೊಡ್ಡ ಘಟ್ಟ. ಪಾಸಾಗೋಕೆ ವಿದ್ಯಾರ್ಥಿಗಳು ಹರಸಾಹಸ ಪಡುತ್ತಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ತುಂಬಾ ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದ. ಆದ್ರೆ ರಿಸಲ್ಟ್ ಶೀಟ್ ನೋಡಿ ಆತನಿಗೆ ಶಾಕ್ ಕಾದಿತ್ತು. ಈ ವಿದ್ಯಾರ್ಥಿಯ ಹೆಸರು ರಮೇಶ್ ಬನ್ನಪ್ಪನವರ. ಧಾರವಾಡದ ಕೆಲಗೇರಿ ಬಡಾವಣೆ ನಿವಾಸಿ.
ರಮೇಶ, ಧಾರವಾಡ ನಗರದ ಆರ್‌ಎಲ್ಎಸ್ ಶಾಲೆಯ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದ. ಆದ್ರೆ ಇತನಿಗೆ ಬರಬೇಕಾದ ಅಂಕದ ಬದಲಿಗೆ ಕೇವಲ 10 ಅಂಕ ಬಂದಿದೆ. ರಮೇಶನಿಗೆ ಶೇ.85 ಅಂಕ ಆಗದೇ ಇದ್ದರೂ ಕನಿಷ್ಠ ಶೇ.80 ಅಂಕವಾದ್ರೂ ಬಂದೇ ಬರುತ್ತೆ ಅಂತ ತಿಳಿದಿದ್ದ. ಆದ್ರೆ ಯಾವಾಗ ರಿಸಲ್ಟ್ ಶೀಟ್‌ನಲ್ಲಿ ಕೇವಲ 10 ಅಂಕ ಕಂಡಿತೋ ಆಗ ಮನೆಯವರು ಸಹ ಬೇಜಾರು ಆಗಿದ್ದರು.
ನಾನು ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದೇನೆ ಅನ್ನೋದು ರಮೇಶನ ವಾದ. ಹೀಗಾಗಿ ಫೋಟೋಕಾಪಿ ತರಿಸಿ ನೋಡಿದಾಗ, ಮನೆಯವರಿಗೆ ಮತ್ತೊಂದು ಶಾಕ್ ಕಾದಿದೆ. ಅದೇನಂದ್ರೆ ರಮೇಶನ ಉತ್ತರ ಪತ್ರಿಕೆಯನ್ನು ಚೆನ್ನಾಗಿಯೇ ಮೌಲ್ಯಮಾಪನ ಮಾಡಲಾಗಿದೆ. ಜೊತೆಗೆ ಒಟ್ಟು 82 ಅಂಕಗಳನ್ನೂ ಸಹ ಆ ಉತ್ತರ ಪತ್ರಿಕೆಯಲ್ಲಿ ನೀಡಲಾಗಿದೆ. ಆದ್ರೆ ರಿಸಲ್ಟ್ ಶೀಟ್ ತಯಾರು ಮಾಡುವಾಗ ಮಾತ್ರ 82 ಅಂಕಗಳನ್ನು ನಮೂದಿಸಬೇಕಾದ ಜಾಗದಲ್ಲಿ 10 ಅಂಕ ನಮೂದಿಸಿದ್ದಾರೆ. ಸದ್ಯ ಇದರಿಂದಾಗಿ ರಮೇಶ ಪಿಯುಸಿಗೆ ಪ್ರವೇಶ ಪಡೆಯುವುದರಿಂದಲೂ ವಂಚಿತನಾಗಿದ್ದು, ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ.
Kshetra Samachara
02/06/2022 05:06 pm