ಹುಬ್ಬಳ್ಳಿ: ಕೋವಿಡ್ ಮಹಾಮಾರಿಯಿಂದ ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಗಿದ್ದ, ವಿದ್ಯಾರ್ಥಿ ವಸತಿನಿಲಯಗಳು ಮತ್ತೆ ವಸತಿ ನಿಲಯಗಳಾಗಿ ಬದಲಾಗಿದೆ. ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್ ಗಳತ್ತ ಬರುತ್ತಿಲ್ಲ, ಸ್ಟೂಡೆಂಟ್ಸ್ ಇಲ್ಲದೆ ವಸತಿ ನಿಲಯಗಳು ಖಾಲಿ ಖಾಲಿಯಾಗಿದೆ..
ವಿಶ್ವವನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಶಾಲಾ ಕಾಲೇಜುಗಳು ಕ್ಲೋಸ್ ಆಗಿದ್ದವು. ನವೆಂಬರ್ 17 ರಿಂದ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಆರಂಭವಾದ ಹಿನ್ನೆಲೆ ವಿದ್ಯಾರ್ಥಿಗಳ ವಸತಿ ನಿಲಯಗಳು ಮತ್ತೆ ಎಂದಿನಂತೆ ಆರಂಭವಾಗಿದೆ. ಕೋವಿಡ್ ಮುಂಜಾಗ್ರತ ಕ್ರಮಗಳನ್ನ ಕೈಗೊಂಡು ಹಾಸ್ಟೆಲ್ ಆರಂಭ ಮಾಡಿದ್ರು, ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್ ನತ್ತ ಸುಳಿಯುತ್ತಿಲ್ಲ. ಹಾಸ್ಟೆಲ್ ಗೆ ಪ್ರವೇಶ ಪಡೆಯುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಯು ಕೋವಿಡ್ ನೆಗೆಟಿವ್ ವರದಿ ಹಾಗೂ ಪಾಲಕರ ಒಪ್ಪಿಗೆ ಪತ್ರ ತರೋದು ಕಡ್ಡಾಯವಾಗಿದೆ. ಇದೆ ಕಾರಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್ ನತ್ತ ಮುಖಮಾಡಿಲ್ಲ..
ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಗಿದ್ದ ವಸತಿ ನಿಲಯಗಳು ಈಗ ಮತ್ತೆ ಎಂದಿನಂತೆ ವಿದ್ಯಾರ್ಥಿಗಳ ವಸತಿ ನಿಲಯಗಳಾಗಿ ಕಾರ್ಯಾರಂಭ ಮಾಡಿವೆ. ಧಾರವಾಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿನದಲ್ಲಿರುವ 41 ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 16 ಹಾಸ್ಟೆಲ್ ಗಳಲ್ಲಿ 1084 ವಿದ್ಯಾರ್ಥಿಗಳಿಗೆ ಉಳಿಯಲು ಅವಕಾಶವಿದೆ, ಆದ್ರೆ ಇದುವರೆಗೆ ಕೇವಲ 149 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿದು ಆನ್ ಲೈನ್ ಪಾಠಗಳಿಗೆ ಮೊರೆ ಹೋಗಿದ್ದಾರೆ. ಕೋವಿಡ್ ಟೆಸ್ಟ್ ಬಳಿಕ ವರದಿಗಳು ತಡವಾಗಿ ವಿದ್ಯಾರ್ಥಿಗಳ ಕೈಗೆ ಸೇರುತ್ತಿರುವುದು ಮತ್ತು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಹ ವಸತಿನಿಲಯಗಳಿಗೆ ವಿದ್ಯಾರ್ಥಿ ಗಳು ಬರದಿರಲು ಕಾರಣ ಎನ್ನಲಾಗುತ್ತಿದೆ.
ಶೈಕ್ಷಣಿಕ ಕ್ಷೇತ್ರದ ಮೇಲೆ ಕೋವಿಡ್ ಎಪೆಕ್ಟ್ ಇನ್ನು ಮುಂದುವರಿದಿದೆ. ಕಾಲೇಜುಗಳು ಆರಂಭವಾದ್ರು ಕೊರೊನಾ ಭಯದ ಹಿನ್ನೆಲೆ ವಿದ್ಯಾರ್ಥಿಗಳು ಮಾತ್ರ ವಸತಿನಿಲಯಗಳಿಗೆ ಬರಲು ಹಿಂದೇಟು ಹಾಕುತ್ತಿದ್ದು, ಬಹುತೇಕ ವಸತಿ ನಿಲಯಗಳು ಖಾಲಿ ಖಾಲಿಯಾಗಿದೆ..
Kshetra Samachara
03/12/2020 04:13 pm