ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾಸ್ಟೆಲ್ ಗಳು ರೆಡಿಯಾಗುತ್ತಿವೆ! ವಿದ್ಯಾರ್ಥಿಗಳೆ ಬನ್ನಿ

ವರದಿ:ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಜಿಲ್ಲಾದ್ಯಂತ ಹಾಸ್ಟೆಲ್‌ಗಳನ್ನು ಸಿದ್ಧಪಡಿಸಿ, ದಾಖಲಾತಿಗೆ ಮುಂದಾಗಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ಆಗಮಿಸಲು ಮನಸ್ಸು ಮಾಡುತ್ತಿಲ್ಲ...

ಕೋವಿಡ್ -19 ನಂತರದಲ್ಲಿ ಪದವಿ , ಸ್ನಾತಕೋತ್ತರ ವೃತ್ತಿಪರ ತಾಂತ್ರಿಕ ಕೋರ್ಸ್‌ಗಳ ಅಂತಿಮ ವಿದ್ಯಾರ್ಥಿಗಳಿಗೆ ನ. 17 ರಿಂದ ತರಗತಿಗಳನ್ನು ಸರ್ಕಾರ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಅಂದಿನಿಂದಲೇ ಹಾಸ್ಟೆಲ್ ಗಳ ಪುನರಾರಂಭಗೊಂಡಿವೆ. ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳನ್ನು, ಸರ್ಕಾರದ ಮಾರ್ಗಸೂಚಿ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಸಜ್ಜಗೊಳಿಸಲಾಗಿದೆ. ಮೂರು ಇಲಾಖೆಯಿಂದ ಜಿಲ್ಲೆಯಲ್ಲಿ ಸುಮಾರು 3000 ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 65 ಹಾಸ್ಟೆಲ್‌ಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಕಳೆದ 10 ದಿನಗಳಿಂದ ಮೂರು ಇಲಾಖೆಯ ಹಾಸ್ಟೆಲ್‌ಗಳಲ್ಲಿ ಶೇ .20 ವಿದ್ಯಾರ್ಥಿಗಳು ದಾಖಲಾಗಿಲ್ಲ..

ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಕೋವಿಡ್ -19 ಕುರಿತ ಆತಂಕ ಕಡಿಮೆಯಾಗಿಲ್ಲ, ಹಾಸ್ಟೆಲ್ ಗೆ ದಾಖಲಾಗುವ 72 ಗಂಟೆ ಮುನ್ನ ಕೋವಿಡ್ -19 ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ತರಬೇಕು ಎನ್ನುವ ನಿಯಮದಿಂದ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕಾಲೇಜುಗಳ ಹಾಜರಾತಿ ಕಡ್ಡಾಯಗೊಳಿಸದಿರುವುದು ಹಾಗೂ ಆನ್‌ಲೈನ್ ಕ್ಲಾಸ್‌ಗಳಿಗೆ ಆದ್ಯತೆ ನೀಡಿರುವುದು ಹಾಸ್ಟೆಲ್ ಪ್ರವೇಶಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ದಿನ ಕಳೆದಂತೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಅಧಿಕಾರಿಗಳಲ್ಲಿದೆ. ಯಾವುದೇ ಭಯವಿಲ್ಲದೆ ವಿದ್ಯಾರ್ಥಿಗಳು ಹಾಸ್ಟೆಲ್ ಗಳಿಗೆ ಪ್ರವೇಶ ಪಡೆಯಬಹುದು.

Edited By : Manjunath H D
Kshetra Samachara

Kshetra Samachara

27/11/2020 07:03 pm

Cinque Terre

41.23 K

Cinque Terre

1

ಸಂಬಂಧಿತ ಸುದ್ದಿ