ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲೆಯಾದ್ಯಂತ ಸಂಭ್ರಮದ ಸೀಗೆಹುಣ್ಣಿಮೆ ಆಚರಣೆ: ಭೂತಾಯಿಗೆ ಉಡಿ ತುಂಬಿದ ರೈತ ಸಮೂಹ

ಧಾರವಾಡ: ಗ್ರಾಮಾಂತರ ಭಾಗಗಳಲ್ಲಿ ಹಬ್ಬ, ಹರಿದಿನಗಳು ತಮ್ಮ ಕಳೆ ಕಳೆದುಕೊಂಡಿಲ್ಲ. ರೈತಾಪಿ ವರ್ಗ ಇನ್ನೂ ಸಂಪ್ರದಾಯಗಳನ್ನು ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಸೀಗೆ ಹುಣ್ಣಿಮೆ ಬಂತೆಂದರೆ ಸಾಕು ರೈತ ಕುಟುಂಗಳು ಫಸಲು ಕೊಡುವ ಭೂತಾಯಿಗೆ ಉಡಿ ತುಂಬಿ ಆಕೆಯನ್ನು ಪೂಜಿಸಿಕೊಂಡು ಬರುತ್ತಾರೆ.

ಭಾನುವಾರ ಧಾರವಾಡ ಜಿಲ್ಲೆಯಾದ್ಯಂತ ಸಂಭ್ರಮದಿಂದ ಸೀಗೆ ಹುಣ್ಣಿಮೆಯನ್ನು ಆಚರಣೆ ಮಾಡಲಾಗಿದೆ. ಹುಣ್ಣಿಮೆ ಅಂಗವಾಗಿ ಮಾಡಲಾಗಿದ್ದ ಹುರಕ್ಕಿ ಹೋಳಗಿ, ಕರ್ಚಿಕಾಯಿ, ಕೊಡಬಳಗಿ, ಚಕ್ಕುಲಿ, ರೊಟ್ಟಿ, ಜೋಳದ ಕಡಬು, ಚಟ್ನಿ ಸೇರಿದಂತೆ ಇತ್ಯಾದಿ ತಹರೇವಾರಿ ತಿಂಡಿ, ತಿನಿಸುಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋದ ರೈತಾಪಿ ವರ್ಗ ಹಾಗೂ ಮಹಿಳೆಯರು, ಹೊಲಕ್ಕೆ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಭೂತಾಯಿಗೆ ನಮನ ಸಲ್ಲಿಸಿದರು. ನಂತರ ಮನೆಯ ಸದಸ್ಯರೆಲ್ಲರೂ ಹೊಲದಲ್ಲಿ ಕುಳಿತುಕೊಂಡು ವಿಶೇಷ ಭೋಜನ ಸವಿದರು. ಪುಟಾಣಿಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ಇನ್ನು ಅಣ್ಣಿಗೇರಿ ಪಟ್ಟಣದ ಅಶೋಕ ಕುರಿ ಎನ್ನುವವರ ಹೊಲದಲ್ಲಿ ಮಹಿಳೆಯರು ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಸೀಗೆ ಹುಣ್ಣಿಮೆ ಆಚರಿಸಿದರು. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಾದ್ಯಂತ ರಜಾ ದಿನವಾದ ಭಾನುವಾರ ಸಂಭ್ರಮದಿಂದಲೇ ಸೀಗೆ ಹುಣ್ಣಿಮೆಯನ್ನು ಆಚರಣೆ ಮಾಡಲಾಗಿದೆ.

Edited By : Somashekar
Kshetra Samachara

Kshetra Samachara

09/10/2022 07:32 pm

Cinque Terre

23.89 K

Cinque Terre

0

ಸಂಬಂಧಿತ ಸುದ್ದಿ