ಹುಬ್ಬಳ್ಳಿ: ಉತ್ತರ ಕರ್ನಾಟಕ ಅಂದರೆ ನಿಜಕ್ಕೂ ಅದೊಂದು ಸಾಂಪ್ರದಾಯಿಕ ಆಚರಣೆಗಳ ತವರೂರು. ಇಂತಹ ತವರಿನಲ್ಲಿ ಗಣಪತಿ ಆಚರಣೆ ನೋಡುವುದೇ ಒಂದು ಸೌಭಾಗ್ಯ. ಇಲ್ಲಿನ ಛಬ್ಬಿ ಗಣಪತಿ ನೋಡಲು ರಾಜ್ಯಾದ್ಯಂತ ಜನರು ಆಗಮಿಸುತ್ತಾರೆ. ಅದೇ ರೀತಿಯಲ್ಲಿ ಇಲ್ಲೊಂದು ಗಣಪತಿಯ ಅಲಂಕಾರ ನೋಡಲು ಜನರು ಸಾಗರೋಪಾದಿಯಲ್ಲಿ ಬರುತ್ತಾರೆ. ಅಷ್ಟಕ್ಕೂ ಯಾವುದು ಆ ಗಣೇಶ ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಭಯಾನಕವಾಗಿ ಕಾಣುವ ದೃಶ್ಯಗಳು. ಒಳಗೆ ಹೋದಂತೆ ಜುರಾಸಿಕ್ ಪಾರ್ಕ್ ಅನುಭವ ನೀಡುವ ಕಲಾಕೃತಿಗಳು. ಕ್ಷಣಕಾಲ ಹೃದಯ ಬಡಿತವನ್ನು ಹೆಚ್ಚಿಸುವ ಧ್ವನಿ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಉಣಕಲ್ ಗ್ರಾಮದ ಟೀಚರ್ಸ್ ಕಾಲೋನಿ. ಹೌದು... ಪ್ರತಿವರ್ಷವೂ ವಿಭಿನ್ನ ರೀತಿಯ ಕಲಾಕೃತಿಗಳ ಮೂಲಕ ಅಲಂಕಾರಗೊಳ್ಳುವ ಈ ಗಣೇಶೋತ್ಸವ ನೋಡುವುದೇ ಒಂದು ಸೌಭಾಗ್ಯ. ವರ್ಷದಿಂದ ವರ್ಷಕ್ಕೆ ಜನರಲ್ಲಿ ಕುತೂಹಲ ಹೆಚ್ಚಿಸುವ ಈ ಗಣೇಶ ಹೊಸ ಹೊಸ ಅಯಾಮಗಳೊಂದಿಗೆ ಜನರ ಮುಂದೆ ಬರುವುದೇ ಇಲ್ಲಿನ ವಿಶೇಷ.
ಜುರಾಸಿಕ್ ಪಾರ್ಕ್ ಅನುಭವ ಮಾತ್ರವಲ್ಲದೆ ಯಾವುದೇ ಹಾರರ್ ಚಿತ್ರಗಳಿಗಿಂತ ಕಡಿಮೆ ಇಲ್ಲ ಎಂಬುವ ರೀತಿಯಲ್ಲಿ ಜನರಿಗೆ ಮನೋರಂಜನೆ ನೀಡುವ ಮೂಲಕ ಗಣೇಶೋತ್ಸವ ಸಂಭ್ರಮದ ಮೆರುಗನ್ನು ಹೆಚ್ಚಿಸುತ್ತಿದೆ. ಹಾಗಿದ್ದರೇ ಈ ಉತ್ಸವದ ವೈಭವವನ್ನು ಕಣ್ಣು ತುಂಬಿಕೊಂಡ ಜನರು ಏನು ಅಂತಾರೇ ಕೇಳಿ..
ಒಟ್ಟಿನಲ್ಲಿ ಹುಬ್ಬಳ್ಳಿಯ ಗಣೇಶೋತ್ಸವ ಅಂದರೆ ಡಿಜೆ ಸೌಂಡ್ ಅಬ್ಬರ ಮಾತ್ರ ಅಂದುಕೊಂಡವರಿಗೆ ಉಣಕಲ್ ಟೀಚರ್ಸ್ ಕಾಲೋನಿಯ ಗಣೇಶ ಹೊಸ ಅನುಭವವನ್ನು ನೀಡುತ್ತಿದ್ದಾನೆ. ಕೆಲಸದ ಒತ್ತಡವನ್ನು ಮರೆಸಿ ಕುಟುಂಬ ಸಮೇತವಾಗಿ ಆಗಮಿಸುವ ಭಕ್ತರಿಗೆ ನಿಜಕ್ಕೂ ಮನರಂಜನೆ ತಾಣವಾಗಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2022 05:56 pm