ಕಲಘಟಗಿ: ಇಂದು ಪತ್ರಿಕಾ ವಿತರಕರ ದಿನದ ಅಂಗವಾಗಿ ಕಲಘಟಗಿ ಪಟ್ಟಣದಲ್ಲಿ ಸತತ 25 ವರ್ಷಗಳಿಂದ ಪತ್ರಿಕೆಯನ್ನು ವಿತರಿಸುತ್ತ ಬಂದಿರುವ ಕಲಘಟಗಿ ಪಟ್ಟಣದ ಅಕ್ಕಿ ಓಣಿಯವರಾದ ಈರಣ್ಣ ಅಂಗಡಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಘಟಗಿ ತಾಲೂಕಿನ ಪತ್ರಕರ್ತ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಪುರದನಗೌಡರ, ಪ್ರಕಾಶ ಲಮಾಣಿ, ಉದಯ ಗೌಡರ, ಈರಣ್ಣ ಕುಬ್ಸದ, ಪರಶುರಾಮ ಹೂಲಿಹೋಂಡ, ಕುಬೇರ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಉದಯ ಗೌಡರ
Kshetra Samachara
04/09/2022 03:26 pm