ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲೆಯಲ್ಲಿ ಡಿಜೆಯೊಂದಿಗೆ ಸಂಭ್ರಮದ ಗಣೇಶೋತ್ಸವ

ಧಾರವಾಡ: ನಾಡಿನಾದ್ಯಂತ ಇಂದು ಸಂಭ್ರಮದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಧಾರವಾಡದಲ್ಲಿ ಕೊರೊನಾ ನಂತರ ಸಡಗರ, ಸಂಭ್ರಮದಿಂದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ.

ಧಾರವಾಡದ ವಿವಿಧ ಗಣೇಶ ಮಂಡಳಿಗಳು ಡಿಜೆ ಹಚ್ಚಿ ಗಣಪನನ್ನು ಬರಮಾಡಿಕೊಂಡಿದ್ದಾರೆ. ಧಾರವಾಡದ ಸುಭಾಷ ರಸ್ತೆ, ಶಿವಾಜಿ ವೃತ್ತ, ಲೈನ್ ಬಜಾರ್ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಯುವಕ ಮಂಡಳದ ಎಲ್ಲ ಯುವಕರ ಡಿಜೆ ಹಚ್ಚಿ ಸಂಭ್ರಮಿಸಿದರು.

ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ಡಿಜೆ ಹಚ್ಚಿ ಗಣಪನನ್ನು ಮೆರವಣಿಗೆ ಮಾಡುವ ಮುಖಾಂತರ ಕೊರೊನಾ ನಂತರ ಗಣಪತಿ ಹಬ್ಬದ ಸಂಭ್ರಮ ಅನುಭವಿಸಿದರು. ಹಬ್ಬದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

31/08/2022 09:57 pm

Cinque Terre

57.94 K

Cinque Terre

3

ಸಂಬಂಧಿತ ಸುದ್ದಿ