ಧಾರವಾಡ: ಅಮೆರಿಕನ್ ಇಂಡಿಯಾ ಫೌಂಡೇಶನ್ ಹಾಗೂ ವೇದಾಂತ ಫೌಂಡೇಶನ್ ನಂದಘರ ಅಂಗನವಾಡಿ ಕೇಂದ್ರ ಇವರ ಸಹಯೋಗದಲ್ಲಿ ಧಾರವಾಡದ ಯರಿಕೊಪ್ಪ ಹಾಗೂ ಕಲಘಟಗಿ ತಾಲೂಕಿನ ಜನ್ನೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಂಭ್ರಮಿಸಿದರು.
ಯರಿಕೊಪ್ಪ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಘರ ಯೋಜನೆಯ ಕ್ಷೇತ್ರ ಸಂಯೋಜನಕರಾದ ನಾಗರಾಜ್ ಕೂಟಗಾರ ಇವರು ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ಇನ್ನು ಅಂಗನವಾಡಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಭಾನ್ವಿತ ಮಕ್ಕಳಿಗೆ ವಿಶೇಷ ಬಹುಮಾನ ವಿತರಿಸಿ ಪ್ರೋತ್ಸಾಹಿಸಿಲಾಯಿತು.
ಇನ್ನು ಜನ್ನೂರ ಗ್ರಾಮದಲ್ಲಿ ನಂದಘರ ಯೋಜನೆಯ ಕ್ಷೇತ್ರ ಸಂಯೋಜಕರಾದ ಮಲ್ಲನಗೌಡ ಕಾಳಗೌರ ಅವರು ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ಅಂಗನವಾಡಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಭಾನ್ವಿತ ಮಕ್ಕಳಿಗೆ ವಿಶೇಷ ಬಹುಮಾನ ವಿತರಿಸಿ ಪ್ರೋತ್ಸಾಹಿಸಿಲಾಯಿತು. ಅಂಗನವಾಡಿ ಕಾರ್ಯಕರ್ತೆ ಸುವರ್ಣ ಅಂಗಡಿ ನಿರೂಪಿಸಿದರು. ಬಾಲ ವಿಕಾಸ ಸಮಿತಿಯ ಸದಸ್ಯರು, ಪ್ರಾಥಮಿಕ ಶಾಲೆಯ ಶಿಕ್ಷಕರು, ಮಕ್ಕಳು, ಊರಿನ ಸಮಸ್ತ ನಾಗರಿಕರು ಭಾಗವಹಿಸಿದ್ದರು.
Kshetra Samachara
15/08/2022 02:03 pm