ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ, ಲ್ಯಾಮಿಗ್ಟನ್ ಬಾಲಕಿಯರ ಪ್ರೌಢಶಾಲಾ ವತಿಯಿಂದ ನಗರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ನಗರದ ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಲ್ಯಾಮಿಗ್ಟನ್ ಶಾಲೆಯ ವಿದ್ಯಾರ್ಥಿಗಳು ಲ್ಯಾಮಿಗ್ಟನ್ ರಸ್ತೆಯಿಂದ ಚನ್ನಮ್ಮ ವೃತ್ತದವರೆಗೂ ವಂದೇ ಮಾತರಂ, ಬೊಲೋ ಭಾರತ ಮಾತಾಕಿ ಜೈ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಕೂಗಿದರು.
ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
13/08/2022 03:16 pm