ನವಲಗುಂದ : ನವಲಗುಂದ ಪಟ್ಟಣಕ್ಕೆ ಮೊದಲ ಬಾರಿ ಆಗಮಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತದ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗಲೆಯವರನ್ನು ನವಲಗುಂದ ಪಟ್ಟಣದ ಲೋಕೊಪಯೋಗಿ ಇಲಾಖೆಯ ಅತಿಥಿ ಸಭಾಭವನದಲ್ಲಿ ಪತ್ರಕರ್ತರಿಂದ ಸನ್ಮಾನಿಸಲಾಯಿತು.
ಇನ್ನು ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸೋಮವಾರ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಚರಂತಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವವಾಣಿ ಪತ್ರಿಕೆಯ ಯಲ್ಲಪ್ಪ ಭೊವಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಡಾ.ಅಬ್ದುಲ್ ರಜಾಕ ನದಾಫ, ವಿನೋದ ಇಚ್ಚಂಗಿ, ಮೆಹಬೂಬಸಾಬ ಅಣ್ಣಿಗೇರಿ, ಚಂದ್ರಶೇಖರ ಕೊಟಗಿ, ಶಿವು ನಾಯಕ, ಆಯ್ಕೆಯಾಗಿದ್ದಾರೆ.
Kshetra Samachara
26/07/2022 08:48 am