ಅಣ್ಣಿಗೇರಿ: ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಯುವಕ ಮಂಡಳ ಹಾಗೂ ಜೈ ಭೀಮ್ ಯುವಕ ಮಂಡಳ ಆಶ್ರಯದಲ್ಲಿ ಪ್ರಪ್ರಥಮವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟಗರಿನ ಕಾಳಗ ಜಿಟಿಜಿಟಿ ಮಳೆಯಲ್ಲಿಯೇ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ ಮಜ್ಜಿಗೆ ಅವರು ಉದ್ಘಾಟನೆ ಮಾಡಿದರು.ಇನ್ನೂ ಬೇರೆಯವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು.
ಬಹಳ ಜಿದ್ದಾಜಿದ್ದಿನ ನಡೆದ ಟಗರಿನ ಕಾಳಗ ನೋಡಲು ಗ್ರಾಮದ ಜನತೆ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಜಿಟಿಜಿಟಿ ಮಳೆ ಲೆಕ್ಕಿಸದೆ ವೀಕ್ಷಣೆ ನೋಡುತ್ತಿರುವ ದೃಶ್ಯಗಳು ಕಂಡುಬಂದವು.
Kshetra Samachara
11/07/2022 10:32 am