ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಉಪ್ಪಿನ ಬೆಟಗೇರಿಯಲ್ಲಿ ಧರ್ಮಸಭೆ ನಡೆಸಿದ ಕೇದಾರ ಪೀಠದ ಜಗದ್ಗುರು

ಧಾರವಾಡ: ಹಿಮವತ್ ಕೇದಾರ ವೈರಾಗ್ಯ ಪೀಠದ ಲಿಂಗೈಕ್ಯ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯ ಸ್ವಾಮೀಜಿಗಳ 100ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ಧರ್ಮಸಭೆ ನಡೆಸಿದರು.

ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಧರ್ಮಸಭೆ ಮುಗಿಸಿಕೊಂಡು ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳನ್ನು ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ಸ್ವಾಮೀಜಿಗಳನ್ನು ಪೂರ್ಣಕುಂಭ ಹೊತ್ತ ಸುಮಂಗಲೆಯರು ಬರಮಾಡಿಕೊಂಡರು. ಅಲ್ಲಿಂದ ಗ್ರಾಮದ ಕರಬಸಪ್ಪ ಓಂಕಾರಿ ಅವರ ಮನೆಗೆ ತೆರಳಿದ ಶ್ರೀಗಳು, ಅಲ್ಲಿ ಧರ್ಮಸಭೆ ನಡೆಸಿ, ರುದ್ರಾಕ್ಷಿಧಾರಣ ಕಾರ್ಯಕ್ರಮ ನಡೆಸಿಕೊಟ್ಟರು. ಕರಬಸಪ್ಪ ಓಂಕಾರಿ ಅವರ ಮನೆಯಲ್ಲೇ ಶ್ರೀಗಳಿಗೆ ಪಾದಪೂಜೆ ಸಹ ನಡೆಯಿತು. ಉಪ್ಪಿನ ಬೆಟಗೇರಿ ಗ್ರಾಮದ ಕುಮಾರ ವಿರುಪಾಕ್ಷ ಸ್ವಾಮೀಜಿಗಳು ಸಹ ಕೇದಾರ ಪೀಠ ಶ್ರೀಗಳನ್ನು ಸನ್ಮಾನಿಸಿದರು.

Edited By : Nagesh Gaonkar
Kshetra Samachara

Kshetra Samachara

06/07/2022 06:30 pm

Cinque Terre

26.04 K

Cinque Terre

0

ಸಂಬಂಧಿತ ಸುದ್ದಿ