ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರಕಟಣೆ

ಧಾರವಾಡ: ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕೊಡಲಾಗುವ ಮೂರು ವರ್ಷಗಳ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದೆ. 2019ರ ಪ್ರಶಸ್ತಿಯು ಪಿ.ಚಂದ್ರಿಕಾ ಅವರ ನಾಟಕ "ಮೋದಾಳಿ"ಗೆ ದೊರಕಿದೆ. 2020ರ ಪ್ರಶಸ್ತಿಯು ಜಯಶ್ರೀ ಹೆಗಡೆಯವರ ಪ್ರಬಂಧ ಸಂಕಲನ "ಇಣುಕಿದಲ್ಲಿ ಛಂದ" ಕೃತಿಗೆ. 2021ರ ಪ್ರಶಸ್ತಿಯು ಬಿ.ಎಂ.ರೋಹಿಣಿಯವರ ಆತ್ಮಕತೆ "ನಾಗಂದಿಗೆಯೊಳಗಿಂದ" ಕೃತಿಗೆ ಲಭಿಸಿದೆ.

ಈ ಮೂರು ವರ್ಷಗಳ ಪ್ರಶಸ್ತಿಗಳನ್ನು ಆತ್ಮಕತೆಗಳಿಗೆ ನಿರ್ಣಾಯಕರಾಗಿ ಡಾ.ಎಲ್.ಸಿ.ಸುಮಿತ್ರಾ. ಡಾ.ಶ್ಯಾಮಸುಂದರ ಬಿದರಕುಂದಿ ಪ್ರಬಂಧಗಳಿಗೆ ಡಾ.ಶಾಲಿನಿ ರಘುನಾಥ ಮತ್ತು ಸುನಂದಾ ಕಡಮೆ ಅವರ ನಾಟಕಗಳಿಗೆ ಡಾ.ವಿ.ಟಿ.ನಾಯಕ ಮತ್ತು ಡಾ.ಬಸೂ ಬೇವಿನಗಿಡದ ಅವರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಶಸ್ತಿಯು ತಲಾ ರೂ ಹತ್ತು ಸಾವಿರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಡಾ. ಸುಧಾ ಮೂರ್ತಿಯವರು ಜೂನ್ 18ರಂದು ಧಾರವಾಡದಲ್ಲಿ ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

Edited By : Vijay Kumar
Kshetra Samachara

Kshetra Samachara

05/06/2022 01:14 pm

Cinque Terre

9.3 K

Cinque Terre

0

ಸಂಬಂಧಿತ ಸುದ್ದಿ