ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಾಬಿನ್ ಕಾಲೇಜಿನಲ್ಲಿ ಸರ್ ಸಿದ್ದಪ್ಪ ಕಂಬಳಿ ಸ್ಮರಣೋತ್ಸವ; "ಸಾಧಕರ ಸ್ಮರಣೆ ನಮಗೆಲ್ಲ ಪ್ರೇರಣೆ"

ಹುಬ್ಬಳ್ಳಿ: ಶಿಕ್ಷಣ ರಂಗದಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿ, ಮಹಾನ್ ಸಾಧಕ ಹಾಗೂ ಸಮಾಜ ಸೇವಕರಾಗಿಯೇ ಜೀವನವನ್ನು ಕಳೆದ ಸರ್ ಸಿದ್ದಪ್ಪ ಕಂಬಳಿಯವರ 63ನೇ ಪುಣ್ಯ ಸ್ಮರಣೋತ್ಸವ ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಮಹಾವಿದ್ಯಾಲಯದಲ್ಲಿ ಜರುಗಿತು.

ಧಾರವಾಡ ಜಿಲ್ಲಾ ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ವತಿಯಿಂದ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಧಾರವಾಡದ ಸಾಹಿತಿಗಳಾದ ಡಾ.ವೀರಣ್ಣ ರಾಜೂರ, ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷರಾದ ಶಂಕರ ಕುಂಬಿ ಅವರು ಸರ್ ಸಿದ್ದಪ್ಪ ಕಂಬಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಉದ್ಘಾಟಿಸಿದರು.

ಸರ್ ಸಿದ್ದಪ್ಪ ಕಂಬಳಿಯವರ ಸಾಧನೆ ಹಾಗೂ ಸಾಮಾಜಿಕ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಮನವರಿಕೆ ಮಾಡಲಾಯಿತು.

ಒಟ್ಟಿನಲ್ಲಿ ಮಹಾನ್ ಸಾಧಕರ ಆದರ್ಶ ಹಾಗೂ ಸಾಧನೆಯನ್ನು ಇಂದಿನ ಯುವ ಪೀಳಿಗೆಗೆ ಅರ್ಥೈಸುವ ಸದುದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.

Edited By : Shivu K
Kshetra Samachara

Kshetra Samachara

29/04/2022 09:27 pm

Cinque Terre

58.04 K

Cinque Terre

2

ಸಂಬಂಧಿತ ಸುದ್ದಿ