ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೇಸಿಗೆಯ ರಜಾ ಮಜಾ ಅನುಭವಿಸುವ ಮಕ್ಕಳು: ಪ್ರತಿಭೆಗಳ ಅನಾವರಣ

ಹುಬ್ಬಳ್ಳಿ: ಪ್ರತಿಯೊಂದು ಮಗುವಿನಲ್ಲಿಯೂ ಒಂದಿಲ್ಲೊಂದು ರೀತಿಯ ಪ್ರತಿಭೆ ಇದ್ದೆ ಇರುತ್ತದೆ. ಬೇಸಿಗೆಯ ರಜಾದಿನಗಳು ಈ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ.

ವಾಣಿಜ್ಯನಗರಿಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಾಂಪ್ರದಾಯಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲೆಗಳನ್ನು ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿರುವ ಕಲೆಯನ್ನು ಅನಾವರಣಗೊಳಿಸಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬೇಸಿಗೆ ರಜಾದಿನಗಳನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಂಡ ಮಕ್ಕಳು ತಮ್ಮಲ್ಲಿರುವ ಕಲೆಯನ್ನು ಹೊರ ಹಾಕುತ್ತಿದ್ದಾರೆ. ತೊದಲು ನುಡಿಯುವ ಮಕ್ಕಳ ಆಟ ನೋಡಿದರೇ ಎಂತವರು ಕೂಡ ಬೆರಗಾಗುವುದು ಖಂಡಿತ.

ಪುಟ್ಟ ಪುಟ್ಟ ಹೆಜ್ಜೆ ಹಾಕುವ ಮೂಲಕ ಮಹಾನ ಸಾಧಕರ ಹಾಗೂ ರಾಮ ಲಕ್ಷ್ಮಣ ಸೀತೆಯರ ವೇಷಗಳನ್ನು ತೊಟ್ಟು ನೃತ್ಯರೂಪಕಗಳ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Manjunath H D
Kshetra Samachara

Kshetra Samachara

26/04/2022 04:39 pm

Cinque Terre

15.23 K

Cinque Terre

0

ಸಂಬಂಧಿತ ಸುದ್ದಿ