ಮಯೂರ ನೃತ್ಯ ಅಕಾಡೆಮಿ ಸಂಯೋಗದಲ್ಲಿ ವಿದ್ಯಾರ್ಥಿನಿ ಮಿಥಾ ಎಸ್. ಗೋಪಾಲಕೃಷ್ಣ ಇವರ ರಂಗ ಪ್ರವೇಶ ಕಾರ್ಯಕ್ರಮವನ್ನು ಇದೇ ಏಪ್ರಿಲ್ 8,ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಹೇಮಾ ವಾಗ್ಮೋಡೆ ಹೇಳಿದರು.
ನಗರದಲ್ಲಿಂದು ಮಾತಾನಾಡಿದ ಅವರು, ಮಕ್ಕಳಿಗೆ ಭರತನಾಟ್ಯದ ಮೂಲಕ ಆಧ್ಯಾತ್ಮಿಕ ವಿಚಾರಗಳನ್ನು ತಿಳಿಹೇಳುತ್ತಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದು ಮಯೂರ ನೃತ್ಯ ಅಕಾಡೆಮಿಯ ಮೂಲ ಉದ್ದೇಶ, ಮಯೂರೋತ್ಸವ , ಭಾವಯಾನ , ವಚನವಾರಿಧಿ , ಶಿಮೋಹ , ರಂಗಪ್ರವೇಶ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ರಾಮಾಯಣ , ಮಹಾಭಾರತ , ವಚನ , ಭಾವಗೀತೆ , ಶಿವತತ್ವಗಳ ಪರಿಚಯ ನೀಡುತ್ತಾ , ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡುತ್ತ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಸಂಸ್ಕಾರ , ಸಂಸ್ಕೃತಿಯನ್ನು ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
Kshetra Samachara
06/04/2022 12:52 pm