ಕುಂದಗೋಳ : ಕರ್ನಾಟಕ ಸರ್ಕಾರ ಚಂದ್ರಮಾನ ಯುಗಾದಿ ದಿನವನ್ನು ಧಾರ್ಮಿಕ ದಿನ ಎಂದು ಆಚರಿಸುತ್ತಿದೆ.
ಈ ದಿನವನ್ನು ಇಂದು ಕುಂದಗೋಳ ಪಟ್ಟಣದ ಶಂಭೋಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ಮಾಡುವ ಮೂಲಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ ಆಚರಿಸಿದರು.
ಈ ಸಂದರ್ಭದಲ್ಲಿ ಶಂಭೋಲಿಂಗೇಶ್ವರ ದೇವಸ್ಥಾನದ ಅರ್ಚಕರು ವಿಠ್ಠಲ ಹಂಪಿಹೋಳಿ, ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರು ಹನುಮಂತಪ್ಪ ರಣತೂರ, ಹಾಗೂ ಮಹದೇವಪ್ಪ ಬಮ್ಮಸಮುದ್ರ ಶಿವಾನಂದ ಕಟಗಿ, ಶಾಮಸುಂದರ ಪವಾರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನೀರಿಕ್ಷಕ ಅಶೋಕ್ ಮಲ್ಲೂರು, ಮಾಂತೇಶ ದೊಡ್ಡಮನಿ ಮಹೇಶ್ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.
Kshetra Samachara
02/04/2022 10:21 pm